Thursday, April 25, 2024
spot_imgspot_img
spot_imgspot_img

ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್ ದಾಖಲು!

- Advertisement -G L Acharya panikkar
- Advertisement -

ಬೆಂಗಳೂರು: ನಟಿ ಸಂಜನಾ ಗಲ್ರಾನಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಮಾಡೆಲ್ ವಂದನಾ ಜೈನ್​ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 2019ರಲ್ಲಿ ಕ್ಲಬ್ ಒಂದಕ್ಕೆ ವಂದನಾ ಜೈನ್ ತನ್ನ ಸ್ನೇಹಿತನೊಂದಿಗೆ ಆಗಮಿಸಿದ್ದರು. ಅದೇ ವೇಳೆ ಕ್ಲಬ್​ನಲ್ಲಿದ್ದ ನಟಿ ಸಂಜನಾ ಗಲ್ರಾನಿ ವಂದನಾ ಜೈನ್​ ಸ್ನೇಹಿತನೊಂದಿಗೆ ಮಾತುಕತೆ ನಡೆಸಿದರು.

ಹೀಗೆ ಮಾತನಾಡುತ್ತಿರುವಾಗ ವಂದನಾ ಜೈನ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಸಂಜನಾ ನೀಡಿದ್ದು, ಆ ವೇಳೆ ವಂದನಾ ಅವಾಚ್ಯ ಶಬ್ದಗಳನ್ನ ಬಳಸದಂತೆ ಸೂಚಿಸಿದ್ದರು. ಇದಕ್ಕೆ ಕೋಪಿಸಿಕೊಂಡ ಸಂಜನಾ ವಂದನಾ ಮುಖಕ್ಕೆ ವಿಸ್ಕಿ ಎರಚಿ ಹಲ್ಲೆ ಮಾಡಿದ್ದಾರೆ.

ಘಟನೆಯಿಂದಾಗಿ ವಂದನಾ ಕಣ್ಣಿಗೆ ಗಾಯವಾಗಿದ್ದು, ಘಟನೆ ಬಳಿಕ ಸಂಜನಾ ಬೆದರಿಕೆ ಕೂಡ ಹಾಕಿದ್ದಳು ಎನ್ನಲಾಗಿದೆ. ಇದೀಗ ಕೋರ್ಟ್​ ಸೂಚನೆಯಂತೆ ಕಬ್ಬನ್ ಪಾರ್ಕ್​ ಠಾಣೆ ಪೊಲೀಸರು ಸಂಜನಾ ಗಲ್ರಾನಿ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!