Friday, June 19, 2026
spot_imgspot_img
spot_imgspot_img

ಪುತ್ತೂರು: H.T ವಿದ್ಯುತ್ ಲೈನಿಗೆ ಡಿಕ್ಕಿಯಾಗಿ ಕೋಳಿ ಸಾಗಾಟದ ಲಾರಿ ಪಲ್ಟಿ

- Advertisement -
- Advertisement -
driving

ಪುತ್ತೂರು: ಕೋಳಿ ಸಾಗಾಟದ ಲಾರಿಯೊಂದು ಹೆಚ್.ಟಿ ವಿದ್ಯುತ್ ಲೈನಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಬೈಪಾಸ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಪುತ್ತೂರಿನ ಬೈಪಾಸ್ ನ ತೆಂಕಿಲದ ಬೈಪಾಸ್ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಅಪಘಾತದಿಂದ ನೂರಾರು ಕೋಳಿಗಳು ಮೃತಪಟ್ಟಿವೆ ಎನ್ನಲಾಗಿದೆ. ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಕೋಳಿಗಳನ್ನು ತುಂಬಿಸಿಕೊ0ಡು ಬರುತಿದ್ದ ಲಾರಿ ಹೆಚ್.ಟಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಜೀವಂತ ಕೋಳಿಗಳೆಲ್ಲ ರಸ್ತೆಯಲ್ಲಿ ತುಂಬಿ ಹೋಗಿತ್ತು. ಹೆಚ್ ಟಿ ವಿದ್ಯುತ್ ಕಂಬ ಮುರಿದ ಕಾರಣ ಪುತ್ತೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪುತ್ತೂರು ಮೆಸ್ಕಾಂ ಸಿಬ್ಬಂದಿಗಳು ಹಾಗೂ ಟ್ರಾಫಿಕ್ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿದ್ದಾರೆ. ಅಪಘಾತದಿಂದ ಲಾರಿ ಚಾಲಕನಿಗೆ ಗಾಯವಾಗಿದೆ.

- Advertisement -

Related news

error: Content is protected !!