Wednesday, July 22, 2026
spot_imgspot_img
spot_imgspot_img

ವಿಟ್ಲ ಮೆಸ್ಕಾಂ ಅಧಿಕಾರಿ/ ನೌಕರರ ಸಂಘ/ ಕೆಪಿಟಿಸಿಎಲ್ ವಿಟ್ಲ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಆಶ್ರಯದಲ್ಲಿ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟ

- Advertisement -
- Advertisement -

ವಿಟ್ಲ ಮೆಸ್ಕಾಂ ಅಧಿಕಾರಿ/ ನೌಕರರ ಸಂಘ/ ಕೆಪಿಟಿಸಿಎಲ್ ವಿಟ್ಲ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಇದರ ಆಶ್ರಯದಲ್ಲಿ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟ ವಿಟ್ಠಲ ಎಜುಕೇಶನ್ ಸೊಸೈಟಿ ಇದರ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಮೆಸ್ಕಾಂನ ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್ ವಿ ಉದ್ಘಾಟಿಸಿ ಮಾತನಾಡಿ “ಕ್ರೀಡೆಯು ನಮ್ಮನ್ನು ಮಾನಸಿಕ ಹಾಗೂ ದೈಹಿಕವಾಗಿ ದೃಡಗೊಳಿಸುತ್ತದೆ. ಅಲ್ಲದೆ ಕ್ರೀಡೆಯಲ್ಲಿ ಯಾವುದೇ ಬೇಭವಿಲ್ಲದೆ ನಮ್ಮನ್ನು ಒಗ್ಗೂಡಿಸುತ್ತದೆ” ಎಂದು ಹೇಳಿದರು.

ವಿಟ್ಲ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ ವಿ ಗೋವಿಂದರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ ಅಡ್ಯಂತಾಯ, ಮೆಸ್ಕಾಂ ಪ್ರತಿನಿಧಿ ಬಾಲಕೃಷ್ಣ ಸೆರ್ಕಳ, ಕ.ವಿ.ಪ್ರ.ನಿ.ನಿ ನೌಕರರ ಸಂಘ ಮಂಗಳೂರು ಮತ್ತು ಉಡುಪಿ ವಲಯದ ಉಪಾಧ್ಯಕ್ಷ ಶಂಕರ ಪ್ರಕಾಶ, ಸಹಾಯಕ ಕಾರ್ಯನಿರ್ವಾಹಕ ಸತೀಶ್ ಸಪಲ್ಯ ಹಾಗೂ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗಣೇಶ್ ಪ್ರಭು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮೆಸ್ಕಾಂನ ತಾಂತ್ರಿಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ವಿಟ್ಲದ ಹರೀಶ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕ.ವಿ.ಪ್ರ.ನಿ.ನಿ ನೌಕರರ ಸಂಘ ಮೆಸ್ಕಾಂ ಮಂಗಳೂರು-ಉಡುಪಿ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಂಕರ ಪ್ರಕಾಶರವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಪ್ರವೀಣ್ ಕೊಟ್ಟಾರಿ, ಸಹಾಯಕ ಇಂಜಿನಿಯರ್ ರಾದ ಶ್ರೀನಿವಾಸ್ ಭಟ್, ದೇವಿಕಿರಣ್, ಹಿರಿಯ ಸಹಾಯಕ ನೆಲ್ಸನ್ ನವೀನ್ ಕುಮಾರ್, ಮೆಸ್ಕಾಂ ಸಹಾಯಕ ಸುಭಾಶ್ ಜಾದವ್, ಗುತ್ತಿಗೆದಾರರ ಸಂಘದ ವಿಟ್ಲ ಸಮಿತಿ ಉಪಾಧ್ಯಕ್ಷ ಜಾನ್ ಶೀಬಾ ಇಲೆಕ್ಟ್ರಿಕಲ್ ಇವರು ಉಪಸ್ಥಿತರಿದ್ದರು.

ವಿಟ್ಲ ಶಾಖಾಧಿಕಾರಿ ಯೋಗೀಶ ಕಾರ್ಯಕ್ರಮ ಸ್ವಾಗತಿಸಿದರು. ಉಕ್ಕುಡ ಶಾಖಾಧಿಕಾರಿ ಆನಂದ್ ವಂದಿಸಿದರು. ವಿಟ್ಲ ಮೆಸ್ಕಾಂ ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ ನಿರ್ವಹಿಸಿದರು.

- Advertisement -

Related news

error: Content is protected !!