Sunday, June 7, 2026
spot_imgspot_img
spot_imgspot_img

ಪುತ್ತೂರು: ಉದ್ಯೋಗದ ಆಮಿಷ ತೋರಿಸಿ ವಂಚನೆ- ವಂಚಕನ ವಿರುದ್ಧ ಕೇಸು ದಾಖಲು

- Advertisement -
- Advertisement -

ಪುತ್ತೂರು: ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಯುವತಿಯರಿಗೆ ವಂಚಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ನವ್ಯ ಎಂಬ ಯುವತಿಯು ತನ್ನ ಸ್ನೇಹಿತೆಯರಲ್ಲಿ ಯತೀಶ್ ಮರಿಲ್ ಎಂಬಾತನನ್ನು ತನ್ನ ಅಣ್ಣನೆಂದು ಪರಿಚಯಿಸಿ ಆತನು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿಸಿ ಕೊಡುತ್ತಾನೆ ಎಂದು ನಂಬಿಸಿದ್ದಾಳೆ. ಇದನ್ನು ನಂಬಿದ ಅವಳ ಗೆಳತಿಯರು ಕೆಲಸದ ಅವಶ್ಯಕತೆಯಿಂದ ಹಣ ನೀಡಲು ಮುಂದಾಗಿದ್ದಾರೆ.

ಒಬ್ಬರಿಗೇ ಮಾತ್ರ ಕೆಲಸ ಆಗಲ್ಲ ಹತ್ತು ಜನರಿಗೇ ಒಟ್ಟಿಗೆ ಕೆಲಸ ಆಗುತ್ತೆ ಎಂದು ಹೇಳಿ ಒಬ್ಬೊಬ್ಬರಿಂದ 8 ಸಾವಿರ ರೂ. ಪಡೆದುಕೊಂಡಿದ್ದಾರೆ. ನಂತರ ಪದೇ ಪದೇ ಯುವತಿಯರಿಗೆ ಕರೆ ಮಾಡಿ ಹಣ ಕೊಡುವಂತೆ ಪೀಡಿಸಿದ್ದಾನೆ. ಯುವತಿಯರು ಹಣ ಕೊಡಲು ಒಪ್ಪದಿದ್ದಾಗ ಅವರನ್ನು ಅವ್ಯಾಚವಾಗಿ ನಿಂದಿಸಿ ತನ್ನ ಮೊಬೈಲ್ ಫೋನ್ ನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ವಂಚನೆಗೆ ಒಳಗಾದ ಯುವತಿಯರು ವಂಚಕನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!