Friday, May 10, 2024
spot_imgspot_img
spot_imgspot_img

ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಶುಭಾರಂಭಗೊಳ್ಳಲಿದೆ ಬೆಂಗಳೂರು, ಮೈಸೂರು ಶೈಲಿಯ ರುಚಿಕರ “ದೋಸ ಕಾರ್ನರ್”

- Advertisement -G L Acharya panikkar
- Advertisement -

ನಿರಂಜನ್ ರೈ ಕುರ್ಲೆತ್ತಿಮಾರ್ ಮಾಲಕತ್ವದ 3೦ ಕ್ಕೂ ಅಧಿಕ ಬಗೆಯ “ದೋಸ ಕಾರ್ನರ್” ಜಿ.ಎಲ್‌ವನ್ ಶಾಪಿಂಗ್ ಮಾಲ್‌ನಲ್ಲಿ ನಾಳೆ ಶುಭಾರಂಭ

ಜಿ.ಎಲ್ ಪ್ರಾಪರ್ಟಿಸ್ ಪ್ರವರ್ತಿತ ಜಿ.ಎಲ್ ವನ್ ಶಾಪಿಂಗ್ ಮಾಲ್ ಕೆಲ ದಿನಗಳಿಂದಷ್ಟೇ ಲೋಕಾರ್ಪಣೆಗೊಂಡಿದ್ದು, ನಗರದ ಮುಖ್ಯ ಬಸ್ ನಿಲ್ದಾಣದಿಂದ 500ಮೀ ದೂರದಲ್ಲಿ ನಿರ್ಮಾಣಗೊಂಡಿರುವ ಈ ಮಾಲ್ 1 ಲಕ್ಷ ಚದರದಡಿ ವಿಸ್ತೀರ್ಣ ಇದೆ. ಒಟ್ಟು ಐದು ಅಂತಸ್ತಗಳವೆ. ಬೇಸ್‌ಮೆಂಟ್‌ನಲ್ಲಿ ವಿಶಾಲ ಪಾರ್ಕಿಂಗ್, ನೆಲ ಮಹಡಿ ಮತ್ತು ಪ್ರಥಮ ಮಹಡಿಯಲ್ಲಿ ಶಾಪಿಂಗ್ ಮಳಿಗೆ, ಎರಡನೇ ಮಹಡಿಯಲ್ಲಿ ಸುಸಜ್ಜಿತ ಮೂರು ಸಿನಿಮಾ ಥಿಯೇಟರ್, ಮಕ್ಕಳ ಮನಂಜನೆಗಾಗಿ ಗೇಮಿಂಗ್ ವಲಯ, ಆರು ಫುಡ್‌ಕೋರ್ಟ್ ಸೇರಿದಂತೆ ವಿವಿಧ ಸೌಲಭ್ಯಗಳಿವೆ.

ಜಿ.ಎಲ್ ನ ಎರಡನೇ ಮಹಡಿಯ ಫುಡ್‌ಕೋರ್ಟ್‌ನಲ್ಲಿ ಎಪ್ರಿಲ್ 8 ರಂದು ದೋಸ ಕಾರ್ನರ್ ಶುಭಾರಂಭಗೊಳ್ಳಲಿದೆ. 30ಕ್ಕೂ ಅಧಿಕ ವೈವಿಧ್ಯಮಯ ದೋಸೆಗಳನ್ನು ಒಂದೇ ಸೂರಿನಡಿಯಲ್ಲಿ ಸವಿಯುವ ಅವಕಾಶ ಪುತ್ತೂರಿನ ಜನತೆಗೆ ನಾಳೆಯಿಂದ ಲಭಿಸಲಿದೆ. ಪರೋಟ, ವಿವಿಧ ಶೈಲಿಯ ರುಚಿಕರವಾದ ದೋಸೆಗಳು, ವೆರೈಟೀಸ್ ಆಪ್ ಹಾಟ್ ಟೀ, ಕಾಫಿ, ಇಡ್ಲಿ, ವಡಾ, ಪಕೋಡ, ಚಾಟ್ಸ್ ಐಟೆಮ್ಸ್, ರೈಸ್ ಬಾತ್, ಫ್ಯಾಮಿಲಿ ಪ್ಯಾಕ್ ದೋಸೆ ಹೀಗೆ ಹಲವು ಬಗೆಯ ರುಚಿಕರ ತಿಂಡಿಗಳು ಈ ದೋಸ ಕಾರ್ನರ್‌ನಲ್ಲಿ ಆಹಾರ ಪ್ರಿಯರಿಗೆ ಲಭ್ಯವಿದೆಯೆಂದು ಸಂಸ್ಥೆಯ ಮಾಲಕ ನಿರಂಜನ್ ರೈ ಕುರ್ಲೆತ್ತಿಮಾರ್ ತಿಳಿಸಿದ್ದಾರೆ.

- Advertisement -

Related news

error: Content is protected !!