Saturday, April 27, 2024
spot_imgspot_img
spot_imgspot_img

ಬೆಳ್ಳಂಬೆಳಗ್ಗೆ ಧಗ ಧಗನೆ ಹೊತ್ತಿ ಉರಿದ ಅಂಗಡಿಗಳು

- Advertisement -G L Acharya panikkar
- Advertisement -

ಪುತ್ತೂರು: ಬೊಳುವಾರಿನ ಕೆಲ ಅಂಗಡಿಗಳು ಇದ್ದಕ್ಕಿದ್ದಂತೆ ಗುರುವಾರ ಬೆಳ್ಳಂಬೆಳಗ್ಗೆ ಧಗ ಧಗನೆ ಹೊತ್ತಿ ಉರಿದಿದ್ದು ಅಗ್ನಿಶಾಮಕದಳದ ಸಿಬಂದಿಗಳು ,ಸ್ಥಳೀಯರ ಸಹಕಾರದಿಂದ ಸತತ ಮೂರು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ , ತರಕಾರಿ ಅಂಗಡಿಗಳಿಗೆ ಹಾಗೂ ಹೋಟೆಲ್ ಒಂದರ ಪಾರ್ಶ್ವಕ್ಕೆ ಬೆಂಕಿ ತನ್ನ ಕೆನ್ನಾಲಗೆಯನ್ನು ಚಾಚಿತ್ತು ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ.

ಪುತ್ತೂರು- ಉಪ್ಪಿನಂಗಡಿ ರಸ್ತೆಯ ಅಂಜನೇಯ ಮಂತ್ರಾಲಯದ ಬಳಿಯಿಂದ ಪುತ್ತೂರಿನ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಏಕಮುಖ ರಸ್ತೆಯ ಬಳಿ ಈ ದುರ್ಘಟನೆ ಅ .15 ರ ಮುಂಜಾನೆ ಸಂಭವಿಸಿದೆ. ಮೊದಲಿಗೆ ಹ್ಯಾರಿಂಗ್ ಸ್ಟುಡಿಯೋ ಎಂಬ ಸೆಲೂನಿನಲ್ಲಿ ಹೊಗೆ ಕಾಣಿಸಿಕೊಂಡಿದೆ . ಇದನ್ನು ಅಲ್ಲಿಯೇ ಗಸ್ತಿನಲ್ಲಿ ನಿರತರಾಗಿದ್ದ ಹೈವೇ ಪಟ್ರೋಲ್ ಸಿಬ್ಬಂದಿಗಳು ಗಮನಿಸಿ ಕೊಡಲೇ . ಅಗ್ನಿ ಶಾಮಕದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲದೇ ಸ್ಥಳೀಯರ ಸಹಕಾರದಿಂದ ಸಿಲೋನ್ ಮಾಲಕ ಉಸ್ಮಾನ್ ಗೂ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!