Saturday, June 20, 2026
spot_imgspot_img
spot_imgspot_img

ಪುತ್ತೂರು: ರೈಲ್ವೇ ನಿಲ್ದಾಣದ ಬಳಿ ಅಪರಿಚಿತ ಶವ ಪತ್ತೆ

- Advertisement -
- Advertisement -

ಪುತ್ತೂರು: ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಅಂದ್ರಟ್ಟ ಎಂಬಲ್ಲಿ ರೈಲ್ವೇ ಸುಪರ್ದಿಯಲ್ಲಿರುವ ಸ್ಥಳದಲ್ಲಿ ಗಿಡಗಂಟಿಗಳ ಮಧ್ಯೆ ಅಪರಿಚಿತ ಶವದ ಮರಣೋತ್ತರ ಪರೀಕ್ಷೆಯು ಫೆ.20ರಂದು ನಡೆಸಲಾಗಿದ್ದು ಪುರುಷನ ಮೃತದೇಹ ಎಂದು ವೈದ್ಯರು ದೃಢಪಡಿಸಿದ್ದಾರೆ.

ಕಬಕ ಪುತ್ತೂರು ರೈಲ್ವೇ ನಿಲ್ದಾಣದ 50 ಮೀಟರ್ ದೂರದಲ್ಲಿರುವ ರೈಲ್ವೇ ಇಲಾಖೆಗೆ ಒಳಪಟ್ಟ ರೈಲ್ವೇ ವಸತಿ ಗೃಹಗಳಿರುವ ಅಂದ್ರಟ್ಟ ಎಂಬ ಸ್ಥಳದಲ್ಲಿ ಫೆ.19ರಂದು ಕೊಳೆತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ರೈಲ್ವೇ ಸಿಬ್ಬಂದಿಗಳು ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳು ಗುಂಪಾಗಿರುವುದನ್ನು ಪರಿಶೀಲಿಸಿದಾಗ ಅಪರಿಚಿತ ಶವ ಇರುವುದು ಬೆಳಕಿಗೆ ಬಂದಿದ್ದು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಫೆ.20ರಂದು ಬೆಳಿಗ್ಗೆ ಸರಕಾರಿ ಆಸ್ಪತ್ರೆಯ ವೈದ್ಯರು ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ ಪುರುಷನ ಮೃತದೇಹ ಎಂದು ಗುರುತಿಸಿದ್ದಾರೆ. ಮೃತ ವ್ಯಕ್ತಿಗೆ ಸುಮಾರು 50ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ರಾತ್ರಿಯಿಂದ ಬೆಳಗ್ಗಿ ನ ತನಕ ಮೃತದೇಹವನ್ನು ಕಾವಲು ಕಾದಿದ್ದರು. ನಗರ ಸಭಾ ಆರೋಗ್ಯ ನಿರೀಕ್ಷಕ ರಾಮಚಂದ್ರ , ಠಾಣಾ ಎಎಸ್‌ಐ ಲೋಕನಾಥ, ಹಾಗೂ ಸಿಬ್ಬಂದಿಗಳು ಮೃತ ಮಹಜರು ನಡೆಸಿ ಮೃತದೇವನ್ನು ತೆರವುಗೊಳಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಯಾರೆಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

- Advertisement -

Related news

error: Content is protected !!