ಆಲಿಗೇನು ಗೊತ್ತು ಕಸ್ತೂರಿಯ ಪರಿಮಳ …!!





ಪುತ್ತೂರು: ಧರ್ಮಸ್ಥಳದ ವಿಚಾರದಲ್ಲಿ ಜನಾರ್ದನ ಪೂಜಾರಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಅವರು ವಿಶ್ವಗುರು ನಾರಾಯಣ ಗುರು ಅವರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ವಿವಾದಕ್ಕೆ ನಾರಾಯಣ ಗುರುಗಳನ್ನು ಎಳೆದು ತರುವ ಅಗತ್ಯ ಇರಲಿಲ್ಲ. ವಿಶ್ವ ಗುರು, ಮೊದಲ ಬಾರಿಗೆ ವಿಶ್ವಧರ್ಮ ಸಮ್ಮೇಳನ ನಡೆಸಿದ್ದ ನಾರಾಯಣ ಗುರುಗಳನ್ನು ಅವಮಾನಿಸಿದ್ದ ಮಹಮ್ಮದ್ ಆಲಿ ಯಾರು ಎಂದು ಪ್ರಶ್ನಿಸಿದ ಅವರು ಇದು ಷಡ್ಯಂತ್ರದ ಒಂದು ಭಾಗ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಆಲಿಗೇನು ಗೊತ್ತು ಆಲದ ಮರದ ಅಗಲ ಮತ್ತು ಆಳ, ಆಲಿಗೇನು ಗೊತ್ತು ಕಸ್ತೂರಿಯ ಪರಿಮಳ, ಮಹಮ್ಮದ್ ಆಲಿ ಇದೆಲ್ಲ ಗೊತ್ತಿಲ್ಲದೆ ಮಾತನಾಡುವುದು ಅಪರಾಧ ಎಂದರು. ಮಹಮ್ಮದ್ ಆಲಿ ಅವರನ್ನು ಪಕ್ಷ ಎಲ್ಲಿಟ್ಟಿದೆ ಎನ್ನುವುದು ನಮಗೆ ತಿಳಿದಿದೆ. ಅಧಿಕಾರ ಇರುವಾಗ ಜನಾರ್ದನ ಪೂಜಾರಿ ಅವರ ಕಾಲು ಹಿಡಿದಿದ್ದ ಆಲಿ ಅವರು, ಇದೀಗ ದೂರುತ್ತಿದ್ದಾರೆ ಎಂದರು.








