Thursday, May 16, 2024
spot_imgspot_img
spot_imgspot_img

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಹೃದಯಾಘಾತದಿಂದ ನಿಧನ

- Advertisement -G L Acharya panikkar
- Advertisement -

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಇಂಜಿನಿಯರ್ ಗೋಪಿನಾಥ್ ಶೆಟ್ಟಿ (60)ಯವರು ದಿಡೀರ್ ಅಸ್ವಸ್ಥಗೊಂಡು ಮಾ 13ರ ನಸುಕಿನ ಜಾವ 2 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧಾನರಾದರು.

1986ರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆರಂಭಗೊಂಡಿದ್ದು 1987ರಲ್ಲಿ ಅದರ ಪ್ರಾಂಶುಪಾಲರಾಗಿ ಗೋಪಿನಾಥ್ ಶೆಟ್ಟಿಯವರು ನೇಮಕಗೊಂಡಿದ್ದರು. ಅದಾದ ಬಳಿಕ ಸುದೀರ್ಘ 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2022 ರಲ್ಲಿ ನಿವೃತ್ತರಾಗಿದ್ದರು. ಈ ಮೂಲಕ ವಿವೇಕಾನಂದ ಪಾಲಿಟೆಕ್ನಿಕ್ ಆಧಾರ ಸ್ಥಂಭವಾಗಿದ್ದರು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಪ್ರಸ್ತುತ ಪುತ್ತೂರು ನಗರ ಸಹ ಸಂಘ ಚಾಲಕ್ ಆಗಿ ಜವಬ್ದಾರಿ ನಿರ್ವಹಿಸುತ್ತಿದ್ದರು.

ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪುತ್ತೂರು ಭಾಗದ ಮೇಲುಸ್ತುವಾರಿಯಾಗಿದ್ದ ಅವರು ಈ ಭಾಗದಲ್ಲಿ ಹತ್ತು ಹಲವು ಜನೌಷಧಿ ಕೇಂದ್ರಗಳ ಆರಂಭಕ್ಕೆ ಕಾರಣಿಭೂತರಾಗಿದ್ದರು. ಮೂಲತ: ವಿಟ್ಲದ ಪೆರುವಾಯಿಯವರಾದ ಗೋಪಿನಾಥ ಶೆಟ್ಟಿಯವರು, ಪ್ರಸ್ತುತ ನೆಹರೂ ನಗರದ ಬಲಮುರಿ ಗಣಪತಿ ದೇವಸ್ಥಾನದ ಬಳಿ ನಂದಿಲದಲ್ಲಿ ವಾಸಿಸುತ್ತಿದ್ದರು.

- Advertisement -

Related news

error: Content is protected !!