Tuesday, July 21, 2026
spot_imgspot_img
spot_imgspot_img

ಪುತ್ತೂರು: ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ (ರಿ) ಪುತ್ತೂರು ಘಟಕದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದಯ ಪೂಜಾರಿ ಬಳ್ಳಾಲ್ ಬಾಗ್ ಸಾರಥ್ಯದ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ (ರಿ) ಪುತ್ತೂರು ಘಟಕದ ಆಡಳಿತ ಮಂಡಳಿ ಪುನರಚನೆಯ ಸಮಾಲೋಚನಾ ಸಭೆ ರೋಟರಿ ಕ್ಲಬ್ ಮನಿಷಾ ಹಾಲ್ ಪುತ್ತೂರು ಇಲ್ಲಿ ನಡೆಯಿತು.

ಬಿರುವೆರ್ ಕುಡ್ಲ (ರಿ) ಕೇಂದ್ರ ಸಮಿತಿಯ ಪ್ರತಿನಿಧಿ ಚೇತನ್ ಬಂಗೇರ ಇವರ ಉಪಸ್ಥಿತಿಯಲ್ಲಿ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ಜಗದೀಶ್ ಅಮಿನ್ ನಡುಬೈಲು, ಗೌರವ ಸಲಹೆಗಾರರಾಗಿ ಹರೀಶ ಶಾಂತಿ ಪುತ್ತೂರು, ನೂತನ ಅಧ್ಯಕ್ಷರಾಗಿ ಜನಾರ್ದನ ಪೂಜಾರಿ ಪಡುಮಲೆ, ಉಪಾಧ್ಯಕ್ಷರಾಗಿ ಮನೋಹರ್ ರೈ ಮೇಲ್ಮಜಲು, ಕಾರ್ಯದರ್ಶಿ ಪ್ರವೀಣ್ ಸಣ್ಣಗುತ್ತು ಅಳಿಕೆ, ಜೊತೆ ಕಾರ್ಯದರ್ಶಿ ಭವಿತ್ ಪೂಜಾರಿ ಕುರಿಯ, ಕೋಶಾಧಿಕಾರಿ ಶರತ್ ಕುಮಾರ್ ಬಡಾವು, ಜೊತೆಕೋಶಾಧಿಕಾರಿ ರೋಹನ್ ಪಡ್ನೂರು, ಸಂಘಟನಾ ಕಾರ್ಯದರ್ಶಿ ನಿತೇಶ್ ಪೂಜಾರಿ, ಸಾಮಾಜಿಕ ಜಾಲತಾಣ ಪ್ರಮುಖ ಪ್ರಸಾದ್ ಸಮೃದ್ಧಿ ಪುತ್ತೂರು ಇವರನ್ನು ಆಯ್ಕೆ ಮಾಡಲಾಯಿತು.

ನಂತರ ಮುಂದಿನ ಕಾರ್ಯ ಯೋಜನೆ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಸಂಘಟನೆಯು ಉತ್ತಮವಾದ ಸಮಾಜ ಸೇವೆಯನ್ನು ಮಾಡುತ್ತಾ ಮಂಗಳೂರಿನ ರೀತಿಯಲ್ಲಿ ಯೂ ಇಲ್ಲಿಯೂ ಕೂಡ ಸಮಾಜ ಸೇವೆಯನ್ನು ಮಾಡಲಿ ಎಂದು ಅತಿಥಿಗಳು ಶುಭ ಹಾರೈಸಿದರು. ಪ್ರತಿಯೊಂದು ಸಮಾಜದ ಯುವಕರನ್ನು ಒಗ್ಗೂಡಿಸಿಕೊಂಡು ಮಾಡಿದಂತಹ ಸಂಘಟನೆ ಇದಾಗಿದ್ದು . ಸಮಾಜದಲ್ಲಿ ಬಡ ವರ್ಗದ ವರಿಗೆ ಆಸರೆಯಾಗಿರುವ ಸಂಘಟನೆ ಸಭೆಯಲ್ಲಿ ಬಿರುವೆರ್ ಕುಡ್ಲ (ರಿ) ಸುಳ್ಯ ಘಟಕದ ಅಧ್ಯಕ್ಷ ಭಾಸ್ಕರ್ ಸುಳ್ಯ ಮತ್ತು ರೋಟರಿ ಕ್ಲಬ್ ಈಸ್ಟ್ ಇದರ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಉಪಸ್ಥಿತರಿದ್ದರು. ರಜನಿಶ್ ಕಲ್ಲೆಗ ಅತಿಥಿಗಳನ್ನು ಸ್ವಾಗತಿಸಿದರು.

- Advertisement -

Related news

error: Content is protected !!