Tuesday, June 23, 2026
spot_imgspot_img
spot_imgspot_img

ಪುತ್ತೂರು: ( ಸೆ.14) ತುಳಸಿ ಕ್ಯಾಟರರ್ಸ್ ಪುತ್ತೂರು, ಎಸ್ ಜಿ ಪ್ಯೂರ್‌ ಮಸಾಲೆ ಕುಂಕುಮ ಅಸೋಸಿಯೇಟ್ಸ್ ವಿಜಯ ಸರ್ವಿಸಸ್ ಜಂಟಿ ಆಶ್ರಯದಲ್ಲಿ ’ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ’

- Advertisement -
- Advertisement -

ಪುತ್ತೂರು: ತುಳಸಿ ಕ್ಯಾಟರರ್ಸ್ ಪುತ್ತೂರು, ಎಸ್ ಜಿ ಪ್ಯೂರ್‌ ಮಸಾಲೆ ಕುಂಕುಮ ಅಸೋಸಿಯೇಟ್ಸ್ ವಿಜಯ ಸರ್ವಿಸಸ್ ಇವರ ಜಂಟಿ ಆಶ್ರಯದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಮತ್ತು ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ವತಿಯಿಂದ ’ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ’ವು ದಿನಾಂಕ: 14-09-2025 ಆದಿತ್ಯವಾರ ಬೆಳಗ್ಗೆ ಗಂಟೆ 9.00ರಿಂದ ಜೈನ ಭವನ ಪುತ್ತೂರುನಲ್ಲಿ ನಡೆಯಲಿದೆ.

ಶಿಬಿರದ ನಿರ್ದೇಶಕರು ಲ.ಡಾ.ಎ. ಮನೋಹರ್‌ ರೈ ಭಾಗವಹಿಸಲಿದ್ದಾರೆ.

ಈ ಶಿಬಿರದಲ್ಲಿ ಲಭ್ಯವಿರುವ ಸೇವೆಗಳು :
1) ಬಿ.ಪಿ, ಮಧುಮೇಹ, ರಕ್ತ ವರ್ಗೀಕರಣ, (ರಕ್ತದ ಗುಂಪು) ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ
2) ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯ.
3) ದಂತ ತಪಾಸಣೆ ಮತ್ತು ಸಲಹೆ
4) ಹಲ್ಲುಗಳ ಶುಚೀಕರಣ
5) ಚಿಕ್ಕಚಿಕ್ಕ ಹಲ್ಲುಗಳ ತುಂಬಿಸುವಿಕೆ.
6) ಚಿಕಿತ್ಸೆಗೆ ಒಳಪಡುವ ಮತ್ತು ಬಹಳ ಕೆಟ್ಟಿರುವ ಹಲ್ಲುಗಳನ್ನು ಕೀಳಿಸುವುದು.
7) ಸೀಳು ತುಟಿ ತಪಾಸಣೆ ಮತ್ತು ಸಲಹೆ
8) ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡನ್ನು ನೀಡಿ ಸೂಚಿಸಿದ ದಂತ ಚಿಕಿತ್ಸೆಯನ್ನು ಉಚಿತ/ರಿಯಾಯಿತಿ ದರದಲ್ಲಿ ಯೆನೆಪೋಯ ದಂತ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9008838618
7760020013
9901640535

- Advertisement -

Related news

error: Content is protected !!