Thursday, June 18, 2026
spot_imgspot_img
spot_imgspot_img

ಪುತ್ತೂರು: ಕೆಲಸದಿಂದ ಮನೆಗೆ ತೆರಳುತ್ತಿದ್ದ ವೇಳೆ ಯುವತಿಯ ಮೇಲೆ ಪರಿಚಿತ ಯುವಕನಿಂದ ದೌರ್ಜನ್ಯ; ದೂರು ದಾಖಲು

- Advertisement -
- Advertisement -
driving

ಪುತ್ತೂರು: ಯುವತಿಯೊಬ್ಬಳು ಕೆಲಸದಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪರಿಚಯಸ್ಥ ಯುವಕನೊಬ್ಬ ಯುವತಿಯನ್ನು ಹಿಂಬಾಲಿಸಿ ಆಕೆಯ ಮೇಲೆ ದೌರ್ಜನ್ಯ ವೆಸಗಿದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಾಜೆ ಜೋಗಿಬೆಟ್ಟುವಿನಲ್ಲಿ ನಡೆದಿದೆ.

ಆರೋಪಿ ಯುವಕನನ್ನು ಗಣೇಶ ಎಂದು ಗುರುತಿಸಲಾಗಿದೆ.

ಯುವತಿ ಕೆಲಸ ಮುಗಿಸಿ ಮನೆಗೆ ಬಸ್ ನಲ್ಲಿ ತೆರಳುತ್ತಿದ್ದಾಗ ಅದೇ ಬಸ್ ನಲ್ಲಿ ಬಂದ ಆರೋಪಿ ಗಣೇಶ ಆಕೆಯನ್ನು ಹಿಂಬಾಲಿಸಿ ಇಂದ್ರಾಜೆಯಿಂದ ಜೋಗಿಬೆಟ್ಟು ಕಡೆಯ ರಸ್ತೆಯಲ್ಲಿ ಒಬ್ಬಳೇ ಹೋಗುತ್ತಿದ್ದಾಗ ಆಕೆಯ ಮೇಲೆ ದೌರ್ಜನ್ಯ ವೆಸಗಿದ್ದಾನೆ. ಗಾಬರಿಗೊಂಡ ಯುವತಿ ಆತನ ಕೈಯಿಂದ ತಪ್ಪಿಸಿಕೊಂಡು ಪಕ್ಕದಲ್ಲಿರುವ ವಾಸವಿರುವ ಮಾವನನ್ನು ಜೋರಾಗಿ ಕರೆದಿದ್ದು, ಆಗ ಆರೋಪಿ ಗಣೇಶನು ಈ ವಿಚಾರ ಯಾರಲ್ಲಿಯಾದರೂ ಹೇಳಿದರೆ ಮುಂದಿನ ದಿನಗಳಲ್ಲಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿ, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 46/2021 ಕಲಂ: 354(D),354(A),506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!