Thursday, April 25, 2024
spot_imgspot_img
spot_imgspot_img

ಪತ್ರಿಕಾಭವನದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಪತ್ರಕರ್ತರ ಸಂಘದ ಲೆಕ್ಕಪತ್ರ ಆಡಿಟ್ ಮಾಡಿಸಿ, ದುರುಪಯೋಗವಾಗದಂತೆ ನೋಡಿಕೊಳ್ಳಲು ಡಿ.ಆರ್.ಗೆ ಸಂಘದ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷರೂ ಆಗಿರುವ ಶೇಖ್ ಜೈನುದ್ದೀನ್ ರವರಿಂದ ಮನವಿ

- Advertisement -G L Acharya panikkar
- Advertisement -

ಪುತ್ತೂರು: ಇಲ್ಲಿನ ಪತ್ರಿಕಾಭವನದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಲೆಕ್ಕಪತ್ರ ಆಡಿಟ್ ಮಾಡಿಸಿ, ದುರುಪಯೋಗವಾಗದಂತೆ ನೋಡಿಕೊಳ್ಳಲು ಸಂಘದ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷರೂ ಆಗಿರುವ ಶೇಖ್ ಜೈನುದ್ದೀನ್ ಅವರು ಸಹಕಾರ ಸಂಘಗಳ ಉಪನಿಬಂಧಕರಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಸುದ್ದಿ ಬಿಡುಗಡೆಯ ವರದಿಗಾರನಾಗಿ ಕೆಲಸ ಮಾಡುತ್ತಿರುವ ನಾನು ಪುತ್ತೂರು ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯನಾಗಿದ್ದೇನೆ. ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ೨೦೧೪-೧೫ರ ಇಸವಿಯಲ್ಲಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಈ ಸಂಘವನ್ನು ಸಹಕಾರಿ ಸಂಘದ ನಿಯಮದ ಅಡಿಯಲ್ಲಿ ಮಂಗಳೂರಿನಲ್ಲಿ ರಿಜಿಸ್ಟ್ರರ್‍ಡ್ ಮಾಡಿಸಿದ್ದೇನೆ.

ಈ ಸಂಘವು ಪುತ್ತೂರು ಪತ್ರಿಕಾ ಭವನದಲ್ಲಿ ಕಾರ್ಯಾಚರಿಸುತ್ತಿದ್ದು ಅದು ವಾರ್ತಾ ಇಲಾಖೆಯ ಅಡಿಯಲ್ಲಿ ಬರುವ ಸರಕಾರಿ ಕಟ್ಟಡವಾಗಿರುತ್ತದೆ. ಮೂರು ಕೊಠಡಿ ಹಾಗೂ ಸುಸಜ್ಜಿತ ಹಾಲ್ ಇರುವ ಈ ಕಟ್ಟಡದ ವಿದ್ಯುತ್ ಬಿಲ್ಲನ್ನು ಸಂಘ ಪಾವತಿಸುತ್ತದೆ. ಮತ್ತು ನಿರ್ವಹಣೆ ನೋಡಿಕೊಳ್ಳುತ್ತಿದೆ. ಸರಕಾರಕ್ಕೆ ಯಾವುದೇ ಬಾಡಿಗೆ ಅಥವಾ ತೆರಿಗೆ ಕಟ್ಟುತ್ತಿಲ್ಲ.


ಪತ್ರಿಕಾ ಭವನದಲ್ಲಿ ನಡೆಯುವ ಪ್ರತೀ ಪತ್ರಿಕಾ ಗೋಷ್ಠಿಗೆ ಪುತ್ತೂರು ಪತ್ರಕರ್ತರ ಸಂಘ ರೂ.೧,೦೦೦/- ಪಡೆಯುತ್ತದೆ. ತಿಂಗಳಿಗೆ (ಕೊರೋನಾ ಸಮಯ ಬಿಟ್ಟು) ತಿಂಗಳಿಗೆ ೨೦ರಿಂದ ೫೦ ಪತ್ರಿಕಾಗೋಷ್ಠಿ ನಡೆಯುದರಿಂದ ಸಂಘಕ್ಕೆ ತಿಂಗಳಿಗೆ ೨೦ರಿಂದ ೫೦ ಸಾವಿರ ಆದಾಯ ವಿದೆ. ಅಷ್ಟೆಲ್ಲ ಆದಾಯವಿದ್ದರೂ ಈ ಸಂಘವು ರಿಜಿಷ್ಟ್ರರ್‍ಡ್ ಆದಲ್ಲಿಂದ ಇಲ್ಲಿಯವರೇಗೆ ಲೆಕ್ಕ ಪತ್ರವನ್ನು ಚಾರ್ಟ್‌ರ್ಡ್ ಅಕೌಂಟ್ ಮೂಲಕ ಅಡಿಟ್ ಮಾಡಿಸಿರುವುದಿಲ್ಲ.

ಇತ್ತೀಚಿನ ಕೆಲವ ದಿವಸಗಳಲ್ಲಿ ಕೆಲವು ಸದಸ್ಯರು ಸಂಘದ ಅಡಿಯಲ್ಲಿ ಇರುವ ಪತ್ರಿಕಾ ಭವನದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೇಗೆ ಉಳಿದು ದುರುಪಯೋಗ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಅದು ಅಲ್ಲಿ ದುಂದುವೆಚ್ಚ ನಡೆದಿದೆಯೇ? ಎಂಬ ಸಂಶಯಕ್ಕೆ ಎಡೆ ಕೊಟ್ಟಿದೆ.

ಸಂಘದ ಕೆಲವು ಸದಸ್ಯರು ನೀಡುತ್ತಿರುವ ತೊಂದರೆಗೆ ಮಾಡುತ್ತಿರುವ ಅವ್ಯವಹಾರಕ್ಕೆ ಬೇಸತ್ತು ನಾನು ಇದೇ ನವೆಂಬರ್‌ನಲ್ಲಿ ಸಂಘದ ಸದಸ್ಯತನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ. ಆದರೂ ತಾವುಗಳು ಪುತ್ತೂರು ಪತ್ರಕರ್ತರ ಸಂಘ (ರಿ) ಇದರ ಆದಾಯ ಮತ್ತು ವೆಚ್ಚಗಳನ್ನು ಹಾಗೂ ಲೆಕ್ಕ ಪತ್ರಗಳನ್ನು ಪರಿಶೀಲಿಸಿ, ದುಂದುವೆಚ್ಚ ತಪ್ಪಿಸಿ, ಸರಕಾರಕ್ಕೆ ಸಲ್ಲಬೇಕಾದ ಮೊತ್ತವನ್ನು ಪಾವತಿಸುವಂತೆ ಮಾಡಿ, ಪತ್ರಿಕಾ ಭವನವನ್ನು ಯಾರೂ ದುರುಪಯೋಗ ಮಾಡದಂತೆ ನೋಡಿಕೊಳ್ಳಬೇಕಾಗಿ ಮತ್ತು ದುರುಪಯೋಗ ಮಾಡಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸುತ್ತಿದ್ದೇನೆ.

ಸಂಘವು ಮತ್ತು ಪತ್ರಿಕಾ ಭವನವು ಸಮಾಜಕ್ಕೆ ಉತ್ತಮ ಸೇವೆ ನೀಡುವ ಚಟುವಟಿಕೆಗಳಿಗೆ ಕಾರಣವಾಗಲಿ ಎಂಬ ಉದ್ದೇಶದಿಂದ ಈ ಪತ್ರವನ್ನು ಬರೆದಿದ್ದೇನೆ ಎಂದು ಅವರು ಡಿ.ಆರ್‌ರವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಪ್ರತಿಯನ್ನು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಯವರಿಗೂ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!