Sunday, June 7, 2026
spot_imgspot_img
spot_imgspot_img

ಪುತ್ತೂರು: ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ; 10 ಸಾಧಕರಿಗೆ ಸನ್ಮಾನ

- Advertisement -
- Advertisement -

ಪುತ್ತೂರು: ಕರ್ನಾಟಕ ರಾಜ್ಯವೆಂದು ಮರು ನಾಮಕರಣವಾದ 50 ನೇ ವರ್ಷದ ಸುವರ್ಣ ಸಂಭ್ರಮ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಧೈಯ ವಾಕ್ಯದೊಂದಿಗೆ ದರ್ಬೆ ವೃತ್ತದಿಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಯೊಂದಿಗೆ ವೈಭವದಿಂದ ನಡೆಯಿತು. ಶಾಸಕ ಅಶೋಕ್‌ ಕುಮಾರ್ ರೈ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕರ್ನಾಟಕ ಸುವರ್ಣ ಸಂಭ್ರದ ಹಿನ್ನಲೆಯಲ್ಲಿ 10 ಮಂದಿ ಸಾಧಕರಾದ ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ.ಸುಬ್ರಾಯ ಭಟ್‌, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಎ.ಪಿ ಸದಾಶಿವ ಮರಿಕೆ, ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಲಾ ಸುರತ್ಕಲ್, ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಶಿಕ್ಷಕ ನಾರಾಯಣ ಕೆ, ಕ್ರೀಡಾ ಕ್ಷೇತ್ರದಲ್ಲಿ ದಯಾನಂದ ರೈ ಕೋರ್ಮಂಡ, ರಂಗಭೂಮಿಯಲ್ಲಿ ಸುಂದರ ರೈ ಮಂದಾರ, ಶಿಕ್ಷಣ ಸಮನ್ವಯದಲ್ಲಿ ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ್‌ ಹಾರ್ವಿನ್, ಸಮಾಜ ಸೇವೆಯಲ್ಲಿ ಸರಕಾರಿ ಆಸ್ಪತ್ರೆಯ ಡಾ.ಅಜಯ್, ಸಾಹಿತ್ಯ ಸಂಘಟನೆಯಲ್ಲಿ ನಾರಾಯಣ ಕುಂಬ್ರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸಿದ್ಧಿಕ್ ನಿರಾಜೆ ಅವರನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶಾಸಕರ ಮೂಲಕ ಸನ್ಮಾನಿಸಲಾಯಿತು.

- Advertisement -

Related news

error: Content is protected !!