






ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ಇದರ ವತಿಯಿಂದ ಬ್ಯಾಂಕಿನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರವು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀಯಲ್ಲಿ 07-06-2025 ನೇ ಶನಿವಾರ ನಡೆಯಿತು.
“ಮಾಸ್ಟರ್ ಮೈಂಡ್ ಎಂಟರ್‌ಪ್ರೈಸಸ್ ಮಂಗಳೂರು” ಇದರ ಮುಖ್ಯಸ್ಥರಾದ ಶ್ರೀ ಶ್ರೀಶ ಕೆ.ಎಂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಿಬ್ಬಂದಿಗಳಿಗೆ ” People Skill Development Program ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹೆಚ್ ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷರಾದ ಮನೋರಂಜನ್ ಕೆ.ಆರ್. ನಿರ್ದೇಶಕರಾದ ದಯಾನಂದ ಆಳ್ವ ಕೆ. ಮೋಹನ್ ಕೆ.ಎಸ್. ಭಾಸ್ಕರ್ ಶೆಟ್ಟಿ, ದಿವಾಕರ ವಿ. ಸತೀಶ ಪಿ. ಪೂವಪ್ಪ ಎಸ್. ಶ್ರೀಮತಿ ಶುಭಲಕ್ಷ್ಮಿ, ಶ್ರೀಮತಿ ಜಯಂತಿ ಎಚ್.ರಾವ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದರು.
ತರಬೇತಿ ನಂತರ ಶ್ರೀಶ ಕೆ.ಎಂ ಇವರನ್ನು ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್ ಹಾಗೂ ಪದಾಧಿಕಾರಿಗಳು ಸ್ಮರಣಿಕೆ ಹಾಗೂ ಹೂ ಗುಚ್ಛ ನೀಡಿ ಗೌರವಿಸಿದರು.








