Friday, June 26, 2026
spot_imgspot_img
spot_imgspot_img

ಪುತ್ತೂರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ತೀವ್ರ ರಕ್ತಸ್ರಾವದಿಂದ ಮೃತ್ಯು!

- Advertisement -
- Advertisement -

ಪುತ್ತೂರು: ಅವಳಿ ಮಕ್ಕಳಿಗೆ ಜನ್ಮ ನೀಡಿ ತಾಯಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ವರದಿಯಾಗಿದೆ.

ಪಂಬೆತ್ತಾಡಿ ಗ್ರಾಮದ ಮೂಲೆಮನೆ ವಿಶ್ವನಾಥ ಗೌಡರ ಪುತ್ರಿ, ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್‌ರವರ ಪತ್ನಿ ಪೂಜಿತ ಮೃತಪಟ್ಟ ಮಹಿಳೆಯಾಗಿದ್ದಾರೆ.

ಪೂಜಿತಾರವರು ಹೆರಿಗೆಗೆಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೇ.9ರಂದು ಬೆಳಿಗ್ಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆರೋಗ್ಯವಾಗಿದ್ದ ಅವರಿಗೆ ಮಧ್ಯಾಹ್ನ ವೇಳೆಗೆ ತೀವ್ರ ರಕ್ತಸ್ರಾವ ಉಂಟಾದ್ದರಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದ್ದು, ಸಂಜೆಯ ವೇಳೆಗೆ ಸ್ವಲ್ಪ ಚೇತರಿಸಿಕೊಂಡಿದ್ದರು. ತಡರಾತ್ರಿಯ ವೇಳೆ ಮತ್ತೆ ರಕ್ತಸ್ರಾವ ಉಂಟಾಗಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಮಕ್ಕಳು ಆರೋಗ್ಯವಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿದ್ದಾರೆ. ಮೃತ ಪೂಜಿತಾ ತಂದೆ, ತಾಯಿ, ಸಹೋದರ, ಪತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಪೂಜಿತಾ ಅವರು ಬಿಎಡ್ ಅಧ್ಯಯನ ನಡೆಸಿದ್ದು, ಇತ್ತೀಚೆಗಷ್ಟೇ ಡಿಸ್ಟಿಂಕ್ಷನ್‌ನೊಂದಿಗೆ ಪಾಸಾಗಿದ್ದರು.

- Advertisement -

Related news

error: Content is protected !!