


ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಆತಿಥ್ಯದಲ್ಲಿ ಕರ್ನಾಟಕ ರಾಜ್ಯಮಟ್ಟದ ಒಂದು ದಿನದ ದೀಕ್ಷಾ ಪಿಎಸ್‌ಟಿ ತರಬೇತಿ ಕಾರ್ಯಗಾರ ನಗರದ ಮಲ್ಲಿಕಟ್ಟೆ ಲಯನ್ ಸೇವಾ ಭವನದಲ್ಲಿ ನಡೆಯಿತು.
ಯಶಸ್ವಿ ರಾಷ್ಟ್ರೀಯ ಅಧ್ಯಕ್ಷ ಚಿತ್ರ ಕುಮಾರ್ ಕಾರ್ಯಗಾರ ಉದ್ಘಾಟಿಸಿದರು. ಕರ್ನಾಟಕ ರಾಜ್ಯದ ಪ್ರಾದೇಶಿಕ ಘಟಕಗಳ ಪರಿಚಯ ಮತ್ತು ಸಾಧನೆ ವಿವರಿಸಿ, ತರಬೇತಿಗೆ ಆಗಮಿಸಿದ ಪ್ರಾದೇಶಿಕ ಘಟಕಗಳ ಅಧ್ಯಕ್ಷರು ಕಾರ್ಯದರ್ಶಿ ಖಜಾಂಚಿ ಘಟಕದ ಪದಾಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ತಿಳಿ ಹೇಳಿದರು.

ಸಂಸ್ಥೆಯ ಆಡಳಿತ ವಿಭಾಗ ರಾಷ್ಟ್ರೀಯ ನಿರ್ದೇಶಕ ನವೀನ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮುಖ್ಯ ತರಬೇತಿದಾರ ಡಾಕ್ಟರ್ ಕೇದಿಗೆ ಅರವಿಂದ್ ರಾವ್, ಎಸ್ ಸಿ ಐ ರಾಷ್ಟ್ರೀಯ ಕಾನೂನು ಸಲಹೆಗಾರ ನಾಗೇಶ್, ರಾಷ್ಟ್ರೀಯ ಉಪಾಧ್ಯಕ್ಷ ಡಿ ಕಿಶೋರ್ ಫರ್ನಾಂಡಿಸ್, ಬಿ ಹುಸೇನ್ ಹೈ ಕಾಡಿ, ಪುಷ್ಪಾ ಶೆಟ್ಟಿ, ಡಾ. ಶಿವಕುಮಾರ್, ರಾಷ್ಟ್ರೀಯ ನಿರ್ದೇಶಕ ಒರಿಯೆಂಟೇಶನ್ ಕೆಪಿಎ ರಹಮಾನ್, ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಎಂ ಕೆ ಕಾರ್ಯದರ್ಶಿ ಸುನಂದ ಶಿವರಾಮ್ , ಪಿಎಸ್‌ಟಿ ತರಬೇತಿ ಕಾರ್ಯಕ್ರಮದ ನಿರ್ದೇಶಕ ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು. ಎಸ್‌ಸಿಐ ಮಂಗಳೂರು ಘಟಕದ ಅಧ್ಯಕ್ಷ ದತ್ತಾತ್ರೇಯ ಬಾಳ ಸ್ವಾಗತಿಸಿದರು ಅನಿಲ್ ಪಿಂಟೋ ಹಾಗೂ ಹರೀಶ್ ಅತಿಥಿ ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ಹೊಸ ಘಟಕವಾದ ಎಸ್‌ಸಿಐ ಪುತ್ತೂರು ಘಟಕ ಇದರ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಅವರನ್ನು ಎಸ್‌ಸಿಐ ರಾಷ್ಟ್ರೀಯ ಅಧ್ಯಕ್ಷ ಚಿತ್ರ ಕುಮಾರ್ ಶಾಲು ಹಾಕಿ ಗೌರವಿಸಿದರು. ಪದಾಧಿಕಾರಿಗಳು ಉಪಸ್ಥಿತರಿದ್ದರು.








