Saturday, May 4, 2024
spot_imgspot_img
spot_imgspot_img

ಪುತ್ತೂರು: ಖೋಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ರಾಜ್ಯ ಮಟ್ಟಕ್ಕೆ ಆಯ್ಕೆ

- Advertisement -G L Acharya panikkar
- Advertisement -

ಪುತ್ತೂರು : ಪುಣಚದ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ನಡೆೆದ ವಿದ್ಯಾ ಭಾರತಿ ಕರ್ನಾಟಕ ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ.

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ನಿತಿನ್ ಕುಮಾರ್, ವಾಣಿಜ್ಯ ವಿಭಾಗದ ಎಚ್ ಅಭಿರಾಮ್, ವಿಜ್ಞಾನ ವಿಭಾಗದ ಮಂಜುನಾಥ್ ಎಸ್, ಸಾತ್ವಿಕ್ ಆರ್, ನಂದನ್ ಗೌಡ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವರುಣ್ ಕುಮಾರ್,ಜೀವನ್ ಎಸ್, ದೇಶಿಕ್ ಕೆ, ರಂಜನ್ ಕೆ.ಆರ್, ವಿಜ್ಞಾನ ವಿಭಾಗದ ಎಲ್. ಧನುಷ್. ಅಶ್ವಿತ್ ಭಂಡಾರಿ,ಮನ್ವಿತ್ ಬಿ ಗೌಡ, ಯಶವಂತ್ ಡಿ.ಎಸ್, ಶ್ರೇಯಸ್ ಪಿ, ಸುಹಾಸ್ ಕೆ ಭಾಗವಹಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ದಿವ್ಯ ಎಂ, ಭೂಮಿಕಾ ಬಿ.ಬಿ, ವಾಣಿಜ್ಯ ವಿಭಾಗದ ಜ್ಯೋತಿಕಾ ಪಿ, ಹಿತಶ್ರೀ, ವಿಜ್ಞಾನ ವಿಭಾಗದ ಪೂರ್ವಿಕ ಎ. ಎಸ್, ಪ್ರತೀಕ್ಷಾ ಸಿ ಎಚ್, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಸಂಸ್ಕçತಿ ಜೈನ್, ದಿಶಾ ವಿ, ಪ್ರಕೃತಿ ಬಿ.ಯು,ನಿಶ್ಮಿತಾ, ಕಲಾ ವಿಭಾಗದ ಶಿವಾನಿ ಪಿ.ಕೆ ಭಾಗವಹಿಸಿದ್ದರು.

ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

- Advertisement -

Related news

error: Content is protected !!