Thursday, April 18, 2024
spot_imgspot_img
spot_imgspot_img

ಪುತ್ತೂರು: ಪ್ರಧಾನಿ ಮೋದಿ ಜನ್ಮದಿನ ಅಂಗವಾಗಿ ಸೇವಾ ಸಪ್ತಾಹ

- Advertisement -G L Acharya panikkar
- Advertisement -

ಪುತ್ತೂರು :  ಪ್ರಧಾನಿ ಮೋದಿ ಅವರ ಜನ್ಮದಿನ ಪ್ರಯುಕ್ತ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸೇವಾ ಸಪ್ತಾಹ ಕಾರ್ಯಕ್ರಮ ನಗರದ ಟೌನ್​ ಬ್ಯಾಂಕ್​​ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಅವರು , ಭಾರತ ಜಗತ್ತಿನ ಗುರುವಾಗಬೇಕು ಎಂಬುದು ಮೋದಿ ಅವರ ಕಲ್ಪನೆಯಾಗಿದೆ. ಭಾರತೀಯ ಜನತಾ ಪಕ್ಷ ರಾಜಕಾರಣ ಕಾರ್ಯಾಲಯ ಅಲ್ಲ, ಜನಸೇವೆ ಕಾರ್ಯಾಲಯ ಹೇಳಿದರು.ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಿ, ಆತ್ಮನಿರ್ಭರ ಭಾರತ ನಿರ್ಮಾಣ ಹಾಗೂ 35 ಕೋಟಿ ಜನರಿಗೆ ಜನಧನ್ ಖಾತೆ ಮೂಲಕ ಸರ್ಕಾರದ ಸವಲತ್ತುಗಳು ನೇರವಾಗಿ ತಲುಪ ವ್ಯವಸ್ಥೆ ಮಾಡಲಾಗಿದೆ. ಉಜ್ವಲ ಯೋಜನೆ ಅಡಿ 5 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್​ ವಿತರಣೆ, ಕಟ್ಟಕಡೆಯ ವ್ಯಕ್ತಿಗೂ ಆಯುಷ್ಮಾನ್ ಯೋಜನೆ, ಮನ್ ಕೀ ಬಾತ್ ಜನರ ಮನಸ್ಸನ್ನು ಮುಟ್ಟುವ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡಬಿದ್ರಿ ,ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ವಿಭಾಗದ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಸುನೀಲ್ ದಡ್ಡು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕಣ್ಣೂರು, ಕಸ್ತೂರಿ ಪಂಜ, ಜಯಂತಿ ನಾಯಕ್ ಇದ್ದರು.

- Advertisement -

Related news

error: Content is protected !!