Sunday, June 21, 2026
spot_imgspot_img
spot_imgspot_img

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ವಸತಿ ನಿಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

- Advertisement -
- Advertisement -

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ವಸತಿ ನಿಲಯದಲ್ಲಿ ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನ ವತಿಯಿಂದ 75 ನೇ ವರ್ಷದ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಮುಖ್ಯ ಅತಿಥಿಗಳಾದ ಕಾರ್ಖಾನೆ ಉದ್ಯೋಗಿಗಳಾದ ಶಿವಪ್ಪ ಎಂ,ರಾಧಾಕೃಷ್ಣ ಭಟ್, ಮೋನಪ್ಪ ಪೂಜಾರಿ,ಮಹೇಶ್ ಕುಮಾರ್ ಪಿ. ಬಿ, ಸುರೇಂದ್ರನ್ ಎಂ, ಜೀವನ್ ದಾಸ್ ರೈ, ಕೆರಿಯಪ್ಪ ಮತ್ತು ಪಿ. ಪಿ. ಅಬ್ಬಾಸ್ ಧ್ವಜಾರೋಹಣ ನೆರವೇರಿಸಿದರು.

ವಿದಿತ, ಶ್ರಾವ್ಯ, ಬೃಂದ, ಕೃತಿ ರಾಷ್ಟ್ರ ಗೀತೆ ಹಾಡಿದರು. ಸುಭಾಷ್ ಸಿ. ವಿ ಸ್ವಾತಂತ್ರೋತ್ಸವ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಪ್ರಶಾಂತ್ ಡಿ. ಎಸ್ ಕಾರ್ಯಕ್ರಮ ನಿರ್ವಹಿಸಿದರು, ರಮೇಶ್ ನೆಗಳಗುಳಿ ಧನ್ಯವಾದ ಸಮರ್ಥಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ಹಂಚಲಾಯಿತು.

- Advertisement -

Related news

error: Content is protected !!