Friday, April 26, 2024
spot_imgspot_img
spot_imgspot_img

ಪುತ್ತೂರು: ಜಯ ಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆ

- Advertisement -G L Acharya panikkar
- Advertisement -

ಪುತ್ತೂರು: ಜಯ ಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯು ಯುವ ಸಂಸ್ಥಾಪಕ ಅಧ್ಯಕ್ಷ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಇವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಸಮಿತಿ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು.

ಮೂಲತಃ ಪುತ್ತೂರಿನವರಾದ ಪ್ರತಿಷ್ಠಿತ ಮನೆತನದ ಬೆಳ್ಳಿಪ್ಪಾಡಿ ಕುಟುಂಬದ ಗುಣರಂಜನ್ ಶೆಟ್ಟಿಯವರ ನೇತೃತ್ವದ ಜಯ ಕರ್ನಾಟಕ ಜನಪರ ವೇದಿಕೆಯು ಈಗಾಗಲೇ ಕರ್ನಾಟಕ ರಾಜ್ಯದ ಸುಮಾರು 17 ಜಿಲ್ಲೆಗಳಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.

ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಈಗಾಗಲೇ ‘ಮನೆಗೊಂದು ಮರ ಊರಿಗೊಂದು ಕೆರೆ’ ಎಂಬ ಶೀರ್ಷಿಕೆಯಡಿಯಲ್ಲಿ ಎರಡು ಕೆರೆಗಳನ್ನು ದತ್ತು ತೆಗೆದುಕೊಂಡು ಅದರ ನವೀಕರಣ ಕಾರ್ಯ ರಭಸದಿಂದ ಸಾಗುತ್ತಿದೆ. ಜಯ ಕರ್ನಾಟಕ ಜನಪರ ವೇದಿಕೆ ನಡೆ ನಿಸರ್ಗದ ಕಡೆ ಎಂಬಂತೆ ಅನೇಕ ಪರಿಸರ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಿದ್ದು ಗಿಡಗಳನ್ನು ನೆಡುವ ಕಾರ್ಯಕ್ರಮ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ನಡೆದಿದೆ ಎಂದು ಸಂಘಟನೆಯ ಕಾರ್ಯವೈಖರಿಯ ಬಗ್ಗೆ ಯುವ ಸಂಸ್ಥಾಪಕ ಅಧ್ಯಕ್ಷರು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾದ ರಾಮದಾಸ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಸಂಸ್ಥಾಪಕ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಸ್ವಾಗತ ಕೋರಿದರು.

ಜಯ ಕರ್ನಾಟಕ ಜನಪರ ವೇದಿಕೆ ಯ ಮೊದಲ ಕಾರ್ಯಕಾರಿಣಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕಾರಿಣಿ ಸದಸ್ಯರಾಗಿ ಕಾವ್ಯ ಶೆಟ್ಟಿ, ನಿಮಿತಾ N ರೈ, ಅಶ್ವಿನಿ ಪೆರುವಾಯಿ, ಸಂತೋಷ್ ಕುಮಾರ್ ರೈ ಕೈಕಾರ, ದೇವಿಪ್ರಸಾದ್ ಶೆಟ್ಟಿ ವಿಟ್ಲ , ಪ್ರವೀಣ್ ಶೆಟ್ಟಿ ತಿಂಗಳಾಡಿ, ನಿತಿನ್ ರೈ ಕುಕ್ಕುವಳ್ಳಿ, ನವೀನ್ ರೈ ಕೈಕಾರ, ಗೌತಮ್ ಶೆಟ್ಟಿ ವಿಟ್ಲ, ಕಾರ್ತಿಕ್ ರೈ ಬೆಳ್ಳಾರೆ, ಅಶ್ವಿನ್ ಅಡ್ಕಾರ್, ಬ್ರಿಜೇಶ್ ನಾಯರ್ ಮಂಗಳೂರು, ಸಂತೋಷ್ ಕುಮಾರ್ ಶಾಂತಿನಗರ, ಅಕ್ಷಯ್ ರೈ ದಂಬೆಕಾನ, ಲೋಕನಾಥ್ ಪಕಳ, ಶ್ರೀಧರ ಶೆಟ್ಟಿ ಗುಬ್ಯಾ, ದಿವಾಕರ ದಾಸ್, ಅಮರ್ ರೈ, ಪ್ರಜ್ವತ್, ಮಹೇಶ್ ,ದೀಪಕ್, ಜಯಂತ್ ಕುಂಬ್ರ, ತಿಲಕ್ ರಾಜ್ ಶೆಟ್ಟಿ, ಪ್ರಭಾಕರ್ ಹಲವಾರು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕಾರಿಣಿ ಸಮಿತಿಯ ಎಲ್ಲಾ ಸದಸ್ಯರನ್ನು ಯುವ ಸಂಸ್ಥಾಪಕ ಅಧ್ಯಕ್ಷರು ಪುಷ್ಪ ಗುಚ್ಚ ಮತ್ತು ಶಾಲು ನೀಡಿ ಸಂಘಟನೆಗೆ ಆತ್ಮೀಯವಾಗಿ ಸ್ವಾಗತಿದರು.

- Advertisement -

Related news

error: Content is protected !!