Wednesday, May 8, 2024
spot_imgspot_img
spot_imgspot_img

(ಅ.22) ಪುತ್ತೂರಿನಲ್ಲಿ ಪ್ರಥಮ ಬಾರಿಗೆ ‘ಪಿಲಿಗೊಬ್ಬು-2023’ ಹಾಗೂ ‘ಫುಡ್ ಫೆಸ್ಟಿವಲ್’ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ಪುತ್ತೂರು: ವಿಜಯ ಸಾಮ್ರಾಟ್(ರಿ) ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ‘ಪಿಲಿಗೊಬ್ಬು-2023’ ಹಾಗೂ ವಿವಿಧ ಖಾದ್ಯಗಳ ‘ಫುಡ್ ಫೆಸ್ಟಿವಲ್’ ಕಾರ್ಯಕ್ರಮವು ಅ.22ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ.

ವಿಜಯ ಸಾಮ್ರಾಟ್(ರಿ) ಪುತ್ತೂರು ಇದರ ಗೌರವಾಧ್ಯಕ್ಷ ಸಹಜ್‌ ಜೆ.ರೈ ಬಳಜ್ಜ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆಯಲಿರುವ‘ಪಿಲಿಗೊಬ್ಬು’ ಸ್ಪರ್ಧೆ ಹಾಗೂ ಫುಡ್ ಫೆಸ್ಟ್ ಗೆ ಭರದ ಸಿದ್ದತೆ ನಡೆಯುತ್ತಿದೆ. ಈ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಆಹ್ವಾನಿತ 10 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. 15 ಹುಲಿಗಳಿಗೆ ಮಾತ್ರ ಒಂದು ತಂಡದಲ್ಲಿ ಅವಕಾಶವಿದ್ದು, ಪ್ರತಿ ತಂಡಕ್ಕೆ 23 ನಿಮಿಷಗಳ ಅವಕಾಶ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ತಾರ ಮೆರಗು ಇರಲಿದ್ದು, ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ ನ ನಟ ನಟಿಯರು ಭಾಗವಹಿಸಲಿದ್ದಾರೆ.

ಬಹುಮಾನಗಳು
ಪ್ರಥಮ -3,00,000/-
ದ್ವಿತೀಯ -2,00,000/-
ತೃತೀಯ -1,00,000/-
10,000/-ರೂ. ಐದು ವೈಯಕ್ತಿಕ ಬಹುಮಾನ

ಪುತ್ತೂರಿನಲ್ಲೇ ಪ್ರಪ್ರಥಮ ಬಾರಿಗೆ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ವಿವಿಧ ಬಗೆಯ ತಿಂಡಿಗಳ “ಫುಡ್‌ ಫೆಸ್ಟ್‌” ಕಾರ್ಯಕ್ರಮ ನಡೆಯಲಿದ್ದು, ಅ.21ರಂದು ಸಂಜೆ 4.00 ಗಂಟೆಗೆ ಚಾಲನೆ ನೀಡಲಿದ್ದಾರೆ. ಅ.22 ರಾತ್ರಿ 12.00ರ ವರೆಗೆ ನಡೆಯಲಿದೆ. ಈ ಫುಡ್‌ ಫೆಸ್ಟ್‌ನಲ್ಲಿ ವಿಭಿನ್ನ ಶೈಲಿಯ ಖಾದ್ಯಗಳು ಗ್ರಾಹಕರನ್ನು ಸೆಳೆಯಲಿದೆ.

- Advertisement -

Related news

error: Content is protected !!