Friday, April 26, 2024
spot_imgspot_img
spot_imgspot_img

ಪುತ್ತೂರು: ವಿವೇಕಾನಂದ ಪದವಿಪೂರ್ವ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; 303 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್!

- Advertisement -G L Acharya panikkar
- Advertisement -

ಪುತ್ತೂರು: 2020-21ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಒಟ್ಟು 10 ಮಂದಿ ವಿದ್ಯಾರ್ಥಿಗಳು ಆರು ನೂರು ಅಂಕಗಳಿಗೆ ಆರು ನೂರು ಅಂಕಗಳನ್ನು ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಸಿ.ಪಿ( ಮಂಡ್ಯದ ಸಿ ಪ್ರಕಾಶ್ ಮತ್ತು ಸುಗುಣ ದಂಪತಿ ಪುತ್ರಿ), ಶಶಾಂಕ್ ಬಿ(ಕೆದಿಲದ ಸೀತರಾಮ ಭಟ್ ಮತ್ತು ಗಾಯತ್ರಿ ದಂಪತಿ ಪುತ್ರ),ಮನೋಜ್ ಎಸ್.ಆರ್( ಹೊಳೆನರಸೀಪುರದ ರಾಜಶೇಖರ ಮತ್ತು ಸಂದ್ಯಾರಾಣಿ ದಂಪತಿ ಪುತ್ರ), ಅವನೀಶ್ ಕೆ(ಕಬಕದ ಗೋಪಾಲಕೃಷ್ಣ ಭಟ್ ಮತ್ತು ಶೈಲಜಾ ದಂಪತಿ ಪುತ್ರ), ಚಿನ್ಮಯಿ(ವಿಟ್ಲದ ರಾಜನಾರಾಯಣ ಮತ್ತು ಗೀತಾ ದಂಪತಿ ಪುತ್ರಿ), ಅಪರ್ಣ ಬಾಳಿಗ ಎಂ(ಪೆರ್ಲದ ರಾಜರಾಮ ಬಾಳಿಗ ಮತ್ತು ರಾಜಶ್ರೀ ಬಾಳಿಗ ದಂಪತಿ ಪುತ್ರಿ), ಶ್ರೇಯಸ್ ಎಚ್(ಬನ್ನೂರಿನ ಆನಂದ ಗೌಡ ಎಚ್ ಮತ್ತು ಸವಿತಾ ದಂಪತಿ ಪುತ್ರ), ಶ್ರೀರಕ್ಷಾ ಬಿ(ಕಾಸರಗೋಡಿನ ಗಿರೀಶ ಮತ್ತು ವೀಣಾ ದಂಪತಿ ಪುತ್ರಿ), ಸಿಂಚನಾ ಲಕ್ಷ್ಮಿ(ಬಂಗಾರಡ್ಕದ ಮುರಳೀಧರ ಭಟ್ ಮತ್ತು ಶೋಭಾ ಬಿ ದಂಪತಿ ಪುತ್ರಿ), ಅಭಿಜ್ಞಾಲಕ್ಷ್ಮಿ (ಮೀಯಪದವಿನ ಶಿವಕುಮಾರ್ ಮತ್ತು ವಾಣಿಶ್ರೀ ದಂಪತಿ ಪುತ್ರಿ) ಆರು ನೂರು ಅಂಕಗಳಲ್ಲಿ ಆರುನೂರು ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಜ್ಞಾನ ವಿಭಾಗದ ಒಟ್ಟು 462 ಮಂದಿ ವಿದ್ಯಾರ್ಥಿಗಳಲ್ಲಿ 230 ಮಂದಿ ಡಿಸ್ಟಿಂಕ್ಷನ್, 228 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರೆ ವಾಣಿಜ್ಯ ವಿಭಾಗದ ಒಟ್ಟು 323 ವಿದ್ಯಾರ್ಥಿಗಳಲ್ಲಿ 67 ಮಂದಿ ಡಿಸ್ಟಿಂಕ್ಷನ್ ಹಾಗೂ 228 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದ ಒಟ್ಟು 37 ವಿದ್ಯಾರ್ಥಿಗಳಲ್ಲಿ 6 ಮಂದಿ ಡಿಸ್ಟಿಂಕ್ಷನ್, 21 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಸಂತೋಷ್ ಬಿ, ಪ್ರಾಂಶುಪಾಲ ಮಹೇಶ ನಿಟಿಲಾಪುರ ಹಾಗೂ ಅಧ್ಯಾಪಕ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!