Tuesday, March 19, 2024
spot_imgspot_img
spot_imgspot_img

ಚಿನ್ನ ಗೆಲ್ಲುವ ಸಿಂಧು ಕನಸು ಭಗ್ನ; ಕಂಚಿಗಾಗಿ ಹೋರಾಡಲು ತಯಾರಿ

- Advertisement -G L Acharya panikkar
- Advertisement -

ಟೋಕಿಯೊ: ಬಂಗಾರದ ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದರು. ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ನೇರ ಸೆಟ್ ಗಳಲ್ಲಿ ಸಿಂಧು ಸೋಲನುಭವಿಸಿದರು. ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ವಿಶ್ವದ ನಂಬರ್ 1 ಆಟಗಾರ್ತಿ ತೈ ಜು ಯಿಂಗ್ ಆಕ್ರಮಣಕಾರಿಯಾಗಿ ಆಡಿದರು.

ಈ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಗೆ ಪ್ರವೇಶ ಪಡೆದರು. ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆಸಲಿದ್ದಾರೆ. ಸಿಂಧು ವಿರುದ್ಧ ತೈ ಜು ಯಿಂಗ್‌ ಈ ಮೊದಲು 13-7 ಗೆಲುವಿನ ದಾಖಲೆ ಹೊಂದಿದ್ದರು. ಕಳೆದ 3 ಪಂದ್ಯಗಳಲ್ಲಿ ಸಿಂಧುಗೆ ಸೋಲುಣಿಸಿದ್ದಾರೆ. ಆದರೆ ಕಳೆದ ರಿಯೋ ಒಲಿಂಪಿಕ್ಸ್‌, 2018ರ ವರ್ಲ್ಡ್ ಟೂರ್‌ ಫೈನಲ್ಸ್‌, 2019ರ ವಿಶ್ವ ಚಾಂಪಿಯನ್‌ಶಿಪ್‌ ಮೊದಲಾದ ದೊಡ್ಡ ಕೂಟಗಳಲ್ಲಿ ತೈಪೆ ಆಟಗಾರ್ತಿಗೆ ಸಿಂಧು ಸೋಲಿನ ರುಚಿ ತೋರಿಸಿದ್ದರು.

- Advertisement -

Related news

error: Content is protected !!