
ಅಹ್ಮದಾಬಾದ್: ಕೇವಲ 2,000 ರೂಪಾಯಿ ಮನೆ ಬಾಡಿಗೆ ಪಾವತಿಸಲು ಹಣವಿಲ್ಲದ ಕಾರಣ, ತನ್ನ ಪತ್ನಿ ಮತ್ತು ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಲು ಮನೆ ಮಾಲಕನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ವ್ಯಕ್ತಿಯನ್ನು ಮತ್ತು ಮನೆ ಮಾಲಕನನ್ನು ಗುಜರಾತ್‌ನ ಮೊರ್ಬಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಸುರೇಂದ್ರನಗರದ ಈ ಕುಟುಂಬ ಆರು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಮೊರ್ಬಿಗೆ ವಲಸೆ ಬಂದಿತ್ತು. ಅಲ್ಲಿ 2,000 ರೂಪಾಯಿ ಬಾಡಿಗೆಯ ಮನೆಯಲ್ಲಿ ವಾಸವಿದ್ದರು. ಆದರೆ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಪಾವತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.ಬಾಡಿಗೆ ಹಣದ ಬದಲಾಗಿ ತನ್ನ ಪತ್ನಿ ಮತ್ತು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆ ವ್ಯಕ್ತಿಯು ಮನೆ ಮಾಲೀಕನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಎನ್ನಲಾಗಿದೆ.
ಸಂತ್ರಸ್ತೆಯ ತಾಯಿ ಅಂದರೆ ಆರೋಪಿಯ ಅತ್ತೆ ಈ ವಿಚಾರ ತಿಳಿದು ಮೊರ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮತ್ತು ಮಾಲಕನನ್ನು ಬಂಧಿಸಿದ್ದಾರೆ.ಇಬ್ಬರ ವಿರುದ್ಧ ‘ಪೊಕ್ಸ್’ ಕಾಯ್ದೆ ಸೇರಿದಂತೆ ಕಠಿಣ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಮೂರನೇ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.”ಅಪ್ರಾಪ್ತ ಬಾಲಕಿಯ ತಂದೆ ಮತ್ತು ಮನೆ ಮಾಲಕ ಸೇರಿ ಈ ದೌರ್ಜನ್ಯವನ್ನು ಯೋಜಿಸಿದ್ದರು” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಎಂ. ಲಾಲ್ ತಿಳಿಸಿದ್ದಾರೆ.








