Tuesday, July 21, 2026
spot_imgspot_img
spot_imgspot_img

ಮೇ.20: ವಿಟ್ಲದಲ್ಲಿ ದ.ಕ. ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ

- Advertisement -
- Advertisement -

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ರೇಷ್ಮೆ ಕೃಷಿ ಮೇಳ” ಕಾರ್ಯಕ್ರಮವು ಮೇ 20ರಂದು ಬುಧವಾರ ವಿಟ್ಲದಲ್ಲಿ ನಡೆಯಲಿದೆ.ವಿಟ್ಲ ಎಜುಕೇಶನ್ ಸೊಸೈಟಿ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಈ ಮೇಳವನ್ನು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಸರಕಾರದ ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನೆ ಸಚಿವರಾದ K. Venkatesh ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ U. T. ಖಾದರ್ , ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ವೇಳೆ ರೇಷ್ಮೆ ಕೃಷಿಯಲ್ಲಿ ಸಾಧನೆಗೈದ ಮಹಿಳಾ ಕೃಷಿಕರಾದ ಮಮತಾ ರೈ ದೇವಸ್ಯ ಹಾಗೂ ಮಿಶ್ರ ಕೃಷಿಯಲ್ಲಿ ಉತ್ತಮ ಅನುಭವಿ ಕೃಷಿಕರಾದ ನವೀನ್ ಚಾಕುಬಾಯ್, ಸುಳ್ಯ ಇವರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ, ಕೃಷಿ ತಂತ್ರಜ್ಞಾನ, ಉದ್ಯಮಾವಕಾಶಗಳು ಹಾಗೂ ರೈತರಿಗೆ ಸಂಬಂಧಿಸಿದ ಮಾಹಿತಿ ವಿನಿಮಯ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗಗಳ ರೈತರು ಹಾಗೂ ಕೃಷಿ ಆಸಕ್ತರು ಭಾಗವಹಿಸುವ ನಿರೀಕ್ಷೆಯಿದೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9663420541 ಹಾಗೂ 7618770541 ಅನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!