Sunday, April 28, 2024
spot_imgspot_img
spot_imgspot_img

ಭಾರತಕ್ಕೆ ರಫೇಲ್ ಅಧಿಕೃತ ಸೇರ್ಪಡೆ: ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ.

- Advertisement -G L Acharya panikkar
- Advertisement -

ನವದೆಹಲಿ:- ಭಾರತಕ್ಕೆ ಐದು ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಗುರುವಾರ ಸೇರ್ಪಡೆಗೊಂಡಿವೆ. ಅಂಬಾಲಾ ವಾಯು ನೆಲೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳನ್ನು ಅಧಿರ್ಕೃತವಾಗಿ ವಾಯುಸೇನೆಗೆ ಸೇರ್ಪಡೆಗೊಳಿಸಲಾಯಿತು. ಈ ಮೂಲಕ ಹಲವು ವರ್ಷಗಳ ಸೇನೆ, ಸರಕಾರ ಹಾಗೂ ಭಾರತೀಯರ ಕನಸು ನನಸಾದಂತೆ ಆಗಿದೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಮತ್ತು ಫ್ರಾನ್ಸ್​ ರಕ್ಷಣಾ ಸಚಿವರಾದ ಫ್ಲೋರೆನ್ಸ್‌ ಪಾರ್ಲಿ ರಫೇಲ್​​ಗಳನ್ನು ಸಮರ್ಪಣೆ ಮಾಡಿದ್ರು. ಹರ್ಯಾಣದ ಅಂಬಾಲಾ ಏರ್​​ಬೇಸ್​ನಲ್ಲಿ ಸೇರ್ಪಡೆ ಸಮಾರಂಭ ನಡೆಯಿತು. ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಯಿಂದಾಗಿ ಭಾರತದ ಸಾಮರಿಕ ಶಕ್ತಿ ವೃದ್ಧಿಸಿದ್ದು, ಇದು ಸಾಕಾರವಾಗಲು ಕಾರಣವಾದ ಫ್ರಾನ್ಸ್ ಸರ್ಕಾರಕ್ಕೆ ತಾವು ಸಮಸ್ತ ಭಾರತೀಯರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ರಾಜನಾಥ್ ಸಿಂಗ್ ಹೇಳಿದರು. ರಫೇಲ್ ಸೇರ್ಪಡೆಯನ್ನು ಐತಿಹಾಸಿಕ ಕ್ಷಣ ಎಂದು ರಾಜನಾಥ್ ಬಣ್ಣಿಸಿದರು.

ಜುಲೈನಲ್ಲಿ ಭಾರತಕ್ಕೆ ಐದು ರಫೇಲ್​​ ವಿಮಾನಗಳು ಬಂದಿದ್ದವು. ಇಂದು ಐದೂ ರಫೇಲ್​​ಗಳು ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್‌ ‘ಗೋಲ್ಡನ್‌ ಆರೋಸ್‌’ನ ಭಾಗವಾಗಲಿದೆ.ಈ ಪೈಕಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲೆಟ್‌ಗಳ ತರಬೇತಿಗಾಗಿ ಫ್ರಾನ್ಸ್‌ನಲ್ಲೇ ಇದ್ದು, ಉಳಿದ ಐದು ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿಳಿದಿದ್ದವು. ನವೆಂಬರ್‌ನಲ್ಲಿ ಮತ್ತೆ 4-5 ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. 2021ರೊಳಗೆ 36 ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಲಿದೆ.

- Advertisement -

Related news

error: Content is protected !!