Friday, May 3, 2024
spot_imgspot_img
spot_imgspot_img

ಮಂಗಳೂರು: ಪಬ್ಬಾಸ್‌ನಲ್ಲಿ ಐಸ್‌ಕ್ರೀಮ್ ಸವಿದ ರಾಹುಲ್ ಗಾಂಧಿ

- Advertisement -G L Acharya panikkar
- Advertisement -

ಕಾಂಗ್ರೆಸ್ ಚುನಾವಣ‌ ಪ್ರಚಾರದ ಹಿನ್ನೆಲೆಯಲ್ಲಿ ಮಂಗಳೂರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗಮಿಸಿದ್ದರು. ರಾತ್ರೋ ರಾತ್ರಿ ನಗರದ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್‌ಗೆ ಕರಾವಳಿ ನಾಯಕರೊಂದಿಗೆ ಕೂತು ಐಸ್‌ಕ್ರೀಂ ಸವಿದಿದ್ದಾರೆ.

ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ರಾತ್ರಿ ಬಿಗಿ ಭದ್ರತೆಯೊಂದಿಗೆ ಪಬ್ಬಾಸ್ ಗೆ ತೆರಳಿ ಕಾಂಗ್ರೆಸ್ ಮುಖಂಡರ ಜೊತೆ ಐಸ್ ಕ್ರೀಮ್ ಸವಿದರು. ಈ ವೇಳೆ ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್, ನಲ್ಪಾಡ್, ಪ್ರತಿಭಾ ಕುಳಾಯಿ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಗೆ ಸಾಥ್ ನೀಡಿದರು. ಈ ವೇಳೆ ರಾಹುಲ್ ಗಾಂಧಿಯೊಂದಿಗೆ ಸೆಲ್ಫಿಗೆ ಜನ ಮುಗಿಬಿದ್ದರು, ಇದಕ್ಕೆ ಸಹಕರಿಸಿದ ರಾಹುಲ್ ಗಾಂಧಿ ಜನರ ಜೊತೆ ಸೆಲ್ಫಿ ತೆಗಿಸಿಕೊಂಡರು.

- Advertisement -

Related news

error: Content is protected !!