Friday, March 29, 2024
spot_imgspot_img
spot_imgspot_img

ಪುರಿ-ಸೂರತ್ ಎಕ್ಸ್‌ಪ್ರೆಸ್ ಟ್ರೈನ್​ಗೆ ಆನೆ ಡಿಕ್ಕಿ!! : ಹಳಿ ತಪ್ಪಿದ ಇಂಜಿನ್

- Advertisement -G L Acharya panikkar
- Advertisement -

ಸಂಬಲ್ಪುರ: ಪುರಿ-ಸೂರತ್ ಎಕ್ಸ್‌ಪ್ರೆಸ್ ಟ್ರೈನ್​ ಆನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆ ಸಾವನ್ನಪ್ಪಿದ್ದು. ರೈಲು ಇಂಜಿನ್ ಹಳಿ ತಪ್ಪಿರುವ ಘಟನೆ ಹತಿಬಾರಿ ಮತ್ತು ಮನೇಶ್ವರ ನಿಲ್ದಾಣಗಳ ನಡುವೆ ಭಾಬನಿಪಲ್ಲಿ ಎಂಬಲ್ಲಿ ಸಂಭವಿಸಿದೆ.

ರೈಲು ರಾತ್ರಿ 1:55 ಕ್ಕೆ ಎಲಿಫೆಂಟ್ ಬ್ಯಾರಿ ನಿಲ್ದಾಣವನ್ನು ದಾಟಿ ಮುಂದಕ್ಕೆ ಪ್ರಯಾಣಿಸುತ್ತಿದ್ದಾಗ ಆನೆಯೊಂದು ರೈಲಿಗೆ ಅಡ್ಡ ಬಂದಿದ್ದರಿಂದ ಈ ಅವಘಡ ನಡೆದಿದೆ. ರೈಲಿನ ವೇಗ ಕಡಿಮೆ ಇರುವುದರಿಂದ ಎಂಜಿನ್ ಮಾತ್ರ ಹಳಿ ತಪ್ಪಿದೆ ಎಂದು ವರದಿಯಾಗಿದೆ.


ಪುರಿ – ಸೂರತ್ ಎಕ್ಸ್‌ಪ್ರೆಸ್ ರೈಲು ಪುರಿಯಿಂದ ಸಂಬಲ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯರ ನೆರವಿನಿಂದ ರೈಲ್ವೆ ಅಧಿಕಾರಿಗಳು ಎಂಜಿನ್​ ಅಡಿಯಲ್ಲಿ ಸಿಲುಕೊಂಡಿರುವ ಆನೆ ಮೃತದೇಹವನ್ನು ತೆಗೆದು ಹಾಕಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!