- Advertisement -
- Advertisement -





ಪುತ್ತೂರು: ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರು ಜೂನ್ 18ರಂದು ಗುರುವಾರ ಬೆಳಿಗ್ಗೆ 9.30 ಗಂಟೆಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಬ್ರಿಜೇಶ್ ಚೌಟ ರವರು ಪುತ್ತೂರು ಕ್ಷೇತ್ರದ ವಿವಿಧ ಕಾಮಾಗಾರಿಗಳಿಗೆ ಶಿಲಾನ್ಯಾಸ, ಪ್ರಗತಿಯಲ್ಲಿ ಇರುವ ರೈಲ್ವೇ ಕಾಮಾಗಾರಿಗಳ ವೀಕ್ಷಣೆ ಮತ್ತು ಕಾರ್ಯಕರ್ತರ ಭೇಟಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 9 : 30 ಕ್ಕೆ ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಅಂದಾಜು ಸುಮಾರು 4.5 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಾಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಂತರ ಕ್ಷೇತ್ರದಲ್ಲಿ ವಿವಿಧ ಕಡೆ ಸಂಸದರ ನಿಧಿಯ ಕಾಮಾಗಾರಿಗಳಿಗೆ ಶಿಲಾನ್ಯಾಸಗೈಲಿದ್ದಾರೆ.
- Advertisement -








