Tuesday, April 23, 2024
spot_imgspot_img
spot_imgspot_img

ಅಶ್ಲೀಲ ಸಿನಿಮಾಗಳ ನಿರ್ಮಾಣ ದಂಧೆ; ಶಿಲ್ಪಾ ಶೆಟ್ಟಿ ನಿವಾಸದ ಮೇಲೆ ಪೊಲೀಸರ ದಾಳಿ

- Advertisement -G L Acharya panikkar
- Advertisement -

ಮುಂಬೈ: ನಟಿ ಶಿಲ್ಪಾ ಶೆಟ್ಟಿ ನಿವಾಸಕ್ಕೆ ಆಗಮಿಸಿರುವ ಪೊಲೀಸರು, ಪತಿ ನಡೆಸುತ್ತಿದ್ದ ಬ್ಲೂ ಫಿಲಂ ದಂಧೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.

ರಾಜ್ ಕುಂದ್ರಾ ಒಡೆತನದ ವಿಯಾನ್ ಕಂಪನಿಯ ನಿರ್ದೇಶಕರಾಗಿರುವ ಬಗ್ಗೆಯೂ ಶಿಲ್ಪಾ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ. ವಿಯಾನ್ ಕಚೇರಿಯಿಂದ ಆಪಾದಿತ ಅಶ್ಲೀಲ ಕೃತ್ಯ ನಡೆಸಲಾಗುತ್ತಿತ್ತು ಎನ್ನಲಾಗಿದೆ. 2020ರಲ್ಲಿ ನಿರ್ದೇಶಕ ಹುದ್ದೆಗೆ ಶಿಲ್ಪಾ ರಾಜೀನಾಮೆ ನೀಡಿದ್ದರು.

ಇತ್ತೀಚೆಗೆ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ವಯಾನ್ ಕಚೇರಿಗೆ ಭೇಟಿ ನೀಡಿದ್ದ ಪೊಲೀಸರು, ಅಶ್ಲೀಲ ಚಲನಚಿತ್ರಗಳ ಬೃಹತ್ ಡೇಟಾ ವಶಪಡಿಸಿಕೊಂಡಿದ್ದರು.

ರಾಜ್ ಕುಂದ್ರಾ ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಇತ್ತೀಚೆಗೆ ತಿಳಿಸಿದ್ದಾರೆ.

- Advertisement -

Related news

error: Content is protected !!