Friday, April 26, 2024
spot_imgspot_img
spot_imgspot_img

ರಾಜರಾಜೇಶ್ವರಿ ಭಜನಾ ಮಂದಿರ ಪೆರುವಾಯಿಯಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣಾ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ನಿನ್ನೆ ದಿನಾಂಕ 20-09-2020ನೇ ಆದಿತ್ಯವಾರದಂದು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಪೆರುವಾಯಿಯಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ದೈವನರ್ತಕರಾದ ಶ್ರೀ ದೆಯ್ಯು ಪಂಡಿತ್ ಕೆದುಮೂಲೆ ಪೆರುವಾಯಿ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ಭಾರತಾಂಬೆಗೆ ಪುಷ್ಪರ್ಚನೆ ಮಾಡುವ ಮೂಲಕ ಉದ್ಘಾಟಿಸಿದ ಸಭಾ ಕಾರ್ಯಕ್ರಮದ ಅತಿಥಿಗಳು ಆಯುಷ್ಮಾನ್ ಕಾರ್ಡ್ ನಾ ಪ್ರಯೋಜನಗಳನ್ನು ಹಾಗೂ ಸಂಘಟನೆಯ ಸೇವಾ ಚಟುವಟಿಕೆಯ ಬಗ್ಗೆ ತಿಳಿಸಿದರು.

ಈ ಸಭಾ ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಗ್ರಾಮದಲ್ಲಿ ಅತ್ಯಧಿಕ ಅಂಕಗಳಿಸಿದ ಕುಮಾರಿ ಚೈತನ್ಯ ಎನ್ ನೆಕ್ಕರೆಕಾಡು ಪೆರುವಾಯಿ ಹಾಗೂ ಕುಮಾರಿ ಅನುಶ್ರೀ ಎಸ್ ಸಾಗು ಕೊಲ್ಲತ್ತಡ್ಕ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪದ್ಮನಾಭ ಕಟ್ಟೆ ಹಾಗೂ ಧಾರ್ಮಿಕ ಮುಂದಾಳು ದಯಾನಂದ ಶೆಟ್ಟಿ ಉಜಿರೆಮಾರ್ ಅತಿಥಿಗಳಾಗಿ ಭಾಗವಹಿಸಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಗೋಪಾಲಕೃಷ್ಣ ಶೆಟ್ಟಿ ಸೇನರಪಾಲು ಹಾಗೂ ರೇವತಿ ಕಡೆoಬಿಲ,ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ,ಪೆರುವಾಯಿ ಘಟಕದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶೇಖರ ಪೂಜಾರಿ ಉಪಸ್ಥಿತರಿದ್ದರು.

ಪೆರುವಾಯಿ ಘಟಕದ ವಿಶ್ವ ಹಿಂದೂ ಪರಿಷತ್ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ ಸ್ವಾಗತಿಸಿದರು.ಬಜರಂಗದಳ ವಿಟ್ಲ ಪ್ರಖಂಡದ ಯತೀಶ್ ಪೆರುವಾಯಿ ಸನ್ಮಾನ ಪತ್ರವನ್ನು ವಾಚಿಸಿದರು.ಬಜರಂಗದಳ ಪೆರುವಾಯಿ ಘಟಕದ ಸಂಚಾಲಕರಾದ ಮೋಕ್ಷಿತ್ ಪೆರುವಾಯಿ ವಂದಿಸಿದರು.ನಾಗೇಶ್ ಮಾಸ್ತರ್ ರವರು ಕಾರ್ಯಕ್ರಮ ನಿರೂಪಿಸಿದರು.

375ಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು ಲ್ಯಾಮಿನೆಶನ್ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪೆರುವಾಯಿ ಕಾನ ಸುಮಿತ್ರಾ ರಮೇಶ್ ಶೆಟ್ಟಿ ಹಾಗೂ ಅತಿಥಿಗಳಿಗೆ ಚಹಾ ತಿಂಡಿಯಾ ವ್ಯವಸ್ಥೆಯನ್ನು ಪೆರುವಾಯಿ ಕಾನ ಸುನಂದಾ ಕರುಣಾಕರ ಶೆಟ್ಟಿ ಮಾಡಿದರು.
ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತಪಡಿಸಿರುವುದರಿಂದ ಇಂದು ಕೂಡ ಮುಂದುವರಿದಿದೆ.

- Advertisement -

Related news

error: Content is protected !!