Monday, June 15, 2026
spot_imgspot_img
spot_imgspot_img

ನೇಣು ಬಿಗಿದುಕೊಂಡು ಯುವಕಿ ಆತ್ಮಹತ್ಯೆ

- Advertisement -
- Advertisement -

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಬೇಳದಲ್ಲಿ ನಡೆದಿದೆ. ಬೇಳ ವಿ.ಎಂ. ನಗರದ ದಾಮೋದರರವರ ಪುತ್ರಿ ಅಶ್ವತಿ(25) ಆತ್ಮಹತ್ಯೆ ಮಾಡಿಕೊಂಡವರು.

ಸೋಮವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕೃತ್ಯ ನಡೆದಿದೆ.

ಮನೆ ಸಮೀಪದ ಬೀಡಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ತಾಯಿ ಸುಜಾತ ಮಧ್ಯಾಹ್ನ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲು ಬಡಿದರೂ  ಯಾರು ತೆರೆಯದಿದ್ದುರಿಂದ ಪರಿಸರದ ಮನೆಯವರಿಗೆ ಮಾಹಿತಿ ನೀಡಿ, ಬಾಗಿಲು ತೆರೆದು ನೋಡಿದಾಗ ನೇಣುಬಿಗಿದಿರುವುದು ಕಂಡು ಬಂದಿದೆ. ಅಶ್ವತಿ ಕಣ್ಣೂರಿನಲ್ಲಿ ವಸ್ತ್ರ ದಂಗಡಿ ನೌಕರಿ ಯಾಗಿ ಕೆಲಸ ಮಾಡುತಿದ್ದು, ಎರಡು ದಿನಗಳಿಂದ ರಜೆಯಲ್ಲಿದ್ದರು. ಪತಿ ಮನೋಹರ್ ವಿದೇಶ ದಲ್ಲಿ ಉದ್ಯೋಗ ದಲ್ಲಿ ದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!