Friday, May 10, 2024
spot_imgspot_img
spot_imgspot_img

ಬಹು ಕೋಟಿ ವಂಚನೆ ಪ್ರಕರಣ; ಪುತ್ತಿಲ ಪರಿವಾರದ ಮುಖಂಡನಿಗೆ ಪುತ್ತೂರಿನಲ್ಲಿ ವಿಜಯನಗರ ಪೊಲೀಸರ ಶೋಧ….!

- Advertisement -G L Acharya panikkar
- Advertisement -

ಬೆಂಗಳೂರು: ಸಿ. ಶಿವಮೂರ್ತಿ ಎಂಬ ವ್ಯಕ್ತಿಗೆ ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತಿಲ ಪರಿವಾರದ ಮುಖಂಡ ರಾಜಶೇಖರ್‌ ಆಲಿಯಾಸ್‌ ಶೇಖರ್‌ ವಿರುದ್ದ ಎಫ್‌ಐಆರ್‌ ದಾಖಲಾಗಿದ್ದು, ಈತನ ಬಂಧನಕ್ಕೆ ವಿಜಯನಗರ ಪೊಲೀಸರು ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.

ಪುತ್ತೂರಿನ ಬನ್ನೂರಿನಲ್ಲಿರುವ ರಾಜಶೇಖರ್ ಮನೆಗೆ ವಿಜಯನಗರ ಪೊಲೀಸರು ಇಂದು ಮುಂಜಾನೆ ದಾಳಿ ನಡೆಸಿದ್ದು, ಮಾಹಿತಿ ತಿಳಿದ ಈತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪುತ್ತೂರಿನ ರಾಜಶೇಖರ ಪರಾರಿಯಾಗಿ ಕೇರಳ ಗಡಿ ಭಾಗದಲ್ಲಿ ಅವಿತು ಕುಳಿತುಕೊಂಡಿದ್ದಾನೆ ಎಂಬ ಮಾಹಿತಿ ಮೇರೆಗೆ ವಿಜಯನಗರ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂಬ ಮಾಹಿತಿ ಇದೆ.

ಏನಿದು ಪ್ರಕರಣ..?

ಸಿ. ಶಿವಮೂರ್ತಿ ಎಂಬ ವ್ಯಕ್ತಿಗೆ ಬಿಜೆಪಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ನಂಬಿಸಿ, ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.50 ಕೋಟಿ ರೂಪಾಯಿ ವಂಚನೆ ಮಾಡಿದ ಬಗ್ಗೆ ವಿಜಯನಗರ ಪೋಲೀಸರಿಗೆ ಈಗ ದೂರು ನೀಡಿದ್ದಾರೆ. ಹಾಗೂ ಬೆಂಗಳೂರಿನ‌ಲ್ಲಿ ಪೋಲೀಸ್ ಮಹಾನಿರ್ದೇಶಕರು, ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ.

ಸಿದ್ದಲಿಂಗಪ್ಪ ಎಂಬ ವ್ಯಕ್ತಿಗೆ ವಿಜಯನಗರ ಜಿಲ್ಲೆಯ ಹರಿಗಬೊಮ್ಮನ ಹಳ್ಳಿಯ ಎಂಬ‌ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಪುತ್ತೂರು ಮೂಲದ ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.55 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ, ಹಾಗೂ ಬೆಂಗಳೂರಿನ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿಸಿದರ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಇದೀಗ ವಿಜಯನಗರ ಉಪವಿಭಾಗದ ಕೊತ್ತೂರು ಪೋಲೀಸ್ ಠಾಣೆಯಲ್ಲಿ IPC 1860 ( U/s, 420, 506, 34 ) ಅಡಿ 19/10/2023 ರಂದು ಪ್ರಕರಣ ದಾಖಲಾಗಿದೆ.‌ ಇಂದು ಅಂದರೆ 21 /10/2023 ರಂದು ವಂಚನೆಗೊಳಗಾದ ಶಿವಮೂರ್ತಿಯವರು ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ. ಇದನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಸಿ.ಬಿ‌. ತನಿಖೆ ನಡೆಸಿ, ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ವಂಚನೆ ಆರೋಪಿ ರಾಜಶೇಖರ ಪುತ್ತೂರಿನ ಪುತ್ತಿಲ ಪರಿವಾರದ ಮುಖಂಡರು ಎನ್ನಲಾಗಿದ್ದು, ಮತ್ತು ಚುನಾವಣೆ ಸಂದರ್ಭದಲ್ಲಿ ಕೆಲವೊಂದು ವೇದಿಕೆ ಗಳಲ್ಲಿ ಕಾಣಿಸಿ ಕೊಂಡಿದ್ದರು.

- Advertisement -

Related news

error: Content is protected !!