Saturday, January 25, 2025
spot_imgspot_img
spot_imgspot_img

ಇಂದು ರಕ್ಷಾಬಂಧನ: ದೇಶದ ಜನತೆಗೆ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಶುಭಾಶಯ

- Advertisement -
- Advertisement -

ಇಂದು ಅಣ್ಣ-ತಂಗಿಯರ ನಡುವಿನ ಬಾಂಧ್ಯವ್ಯ ಬೆಸೆಯುವ ಹಬ್ಬ ರಕ್ಷಾಬಂಧನ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್ ಅವರು, ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು. ರಾಖಿ ಎಂಬುದು ಪ್ರೀತಿ ಹಾಗೂ ನಂಬಿಕೆಯ ಪವಿತ್ರ ಎಳೆ. ಇದು ಸಹೋದರಿ, ಸಹೋದರರೊಂದಿಗೆ ವಿಶೇಷ ಬಂಧದಲ್ಲಿ ಸಂಪರ್ಕಿಸುತ್ತದೆ. ಈ ದಿನ ಮಹಿಳೆಯರ ಗೌರವ ಮತ್ತು ಘನತೆಯನ್ನು ಭದ್ರಪಡಿಸುವ ನಮ್ಮ ಬದ್ಧತೆಯನ್ನು ಪುನರಿಚ್ಚರಿಸೋಣ ಎಂದು ತಿಳಿಸಿದ್ದಾರೆ.

ಇನ್ನು ಪ್ರಧಾನಿ ಮೋದಿ ಕೂಡ ರಕ್ಷಾಬಂಧನ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಎಲ್ಲ ದೇಶವಾಸಿಗಳಿಗೆ ರಕ್ಷಾಬಂಧನದ ಶುಭಾಶಯಗಳು. ಇಂದು ಆಚರಿಸಲಾಗುತ್ತಿರುವ ರಕ್ಷಾಬಂಧನ, ಸಹೋದರ –ಸಹೋದರಿಯರ ನಡುವಿನ ವಿಶಿಷ್ಟ ಬಾಂಧವ್ಯದ ಆಚರಣೆಯಾಗಿದೆ. ಸಹೋದರಿಯರಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹಾಗೂ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಾತ್ಸಲ್ಯ, ಪರಸ್ಪರ ನಂಬಿಕೆಯನ್ನು ಸಂಕೇತಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!