Saturday, June 22, 2024
spot_imgspot_img
spot_imgspot_img

ರಾಮಮಂದಿರ ನಿರ್ಮಾಣಕ್ಕೆ ದಾವಣಗೆರೆಯಿಂದ 15 ಕೆ.ಜಿ ಬೆಳ್ಳಿ ಇಟ್ಟಿಗೆ ರವಾನೆ

- Advertisement -G L Acharya panikkar
- Advertisement -

ದಾವಣಗೆರೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಾಳೆ ನಡೆಯಲಿರುವ ಶಿಲಾನ್ಯಾಸಕ್ಕೆ ದಾವಣೆಗೆರೆಯಿಂದ ಸುಮಾರು 15 ಕೆ.ಜಿ ಬೆಳ್ಳಿ ಇಟ್ಟಿಗೆಯನ್ನು ರವಾನಿಸಲಾಗುವುದು ಎಂದು ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ತಿಳಿಸಿದ್ದಾರೆ.

1990 ರ ಅಕ್ಟೋಬರ್ 6ರಂದು ರಾಮಜ್ಯೋತಿ ರಥಯಾತ್ರೆ ದಾವಣೆಗೆರೆ ಆಗಮಿಸಿತ್ತು. ಈ ವೇಳೆ ಗೋಲಿಬಾರ್ ನಡೆದಿತ್ತು. ಇದರಿಂದಾಗಿ 8 ಮಂದಿ ಹಿಂದೂ ಕಾರ್ಯಕರ್ತರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಅವರ ಸ್ಮರಣಾರ್ಥವಾಗಿ 15 ಕೆ.ಜಿ ಬೆಳ್ಳಿ ಇಟ್ಟಿಗೆ ಮಾಡಿಸಿ ಅದರ ಮೇಲೆ ದಾವಣಗೆರೆಯ ಮೃತ 8 ಮಂದಿ ಹಿಂದೂಕಾರ್ಯಕರ್ತರ ಹೆಸರನ್ನು ಕೆತ್ತಿಸಿ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಗೋಲಿಬಾರ್ ನಡೆದು 30 ವರ್ಷವಾದ ಹಿನ್ನಲೆಯಲ್ಲಿ ಯಾತ್ರೆ ವೇಳೆ ಗಾಯಗೊಂಡ 72 ಮಂದಿ ಕುಟುಂಬದವರಿಗೆ ಹಾಗೂ ಮೃತಪಟ್ಟ 8 ಮಂದಿ ಕಾರ್ಯಕರ್ತರ ಕುಟುಂಬದವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಳೆ ಪಿಜೆ ಬಡಾವಣೆಯಲ್ಲಿರುವ ರಾಮನ ಮೂರ್ತಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದರು.

- Advertisement -

Related news

error: Content is protected !!