Monday, June 8, 2026
spot_imgspot_img
spot_imgspot_img

ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ ಕೇಸ್: ಹೋಟೆಲ್ ಗೋವಾದ ಸಿಸಿ ಕ್ಯಾಮರಾದಲ್ಲಿ ಸಿಡಿ ಲೇಡಿಯ ವಿಡಿಯೋ ಸೆರೆ!!

- Advertisement -
- Advertisement -

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿರುವ ಯುವತಿ ವಾಸ್ತವ್ಯದ ಮಾಹಿತಿಯನ್ನು ಎಸ್ ಐಟಿ ಅಧಿಕಾರಿಗಳು ಪತ್ತೆ ಹೆಚ್ಚಿದ್ದು, ಗೋವಾದ ಹೋಟೆಲ್ ನ ಸಿಸಿ ಕ್ಯಾಮರಾದಲ್ಲಿ ಸಿಡಿ ಲೇಡಿಯ ವಿಡಿಯೋ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ರಾಸಲೀಲೆ ಸಿಡಿಯಲ್ಲಿರುವ ಯುವತಿ ಗೋವಾದಲ್ಲಿ ವಾಸ್ತವ್ಯ ಹೂಡಿರುವ ಕುರಿತು ಎಸ್ ಐಟಿಗೆ ಮಾಹಿತಿ ಲಭ್ಯವಾಗಿದೆ. ಯುವತಿ ಪದೇ ಪದೇ ಹೋಟೆಲ್ ಗಳನ್ನು ಬದಲಾಯಿಸುತ್ತಿದ್ದಾಳೆ. ಎಸ್ ಐಟಿ ಅಧಿಕಾರಿಗಳ ತನಿಖೆಗೆ ಯುವತಿ ಬೆಚ್ಚಿಬಿದ್ದಿದ್ದಾಳೆ ಎನ್ನಲಾಗುತ್ತಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಉಪನ್ಯಾಸಕಿ, ಮಾಧ್ಯಮದವರು ಸೇರಿದಂತೆ ಒಟ್ಟು 5 ಮಂದಿಯನ್ನು ಎಸ್ ಐಟಿ ಅಧಿಕಾರಿಗಳ ತಂಡ ಬಂಧಿಸಿತ್ತು.

ಇದೀಗ ಪ್ರಕರಣ ಕಿಂಗ್ ಪಿನ್ ತಲೆ ಮರೆಯಿಸಿಕೊಂಡಿದ್ದು, ಯುವತಿಯ ಜೊತೆಗೆ ನಿರಂತರ ಸಂಪರ್ಕವನ್ನು ಹೊಂದಿದ್ದಾನೆ ಎನ್ನಲಾಗುತ್ತಿದೆ. ಯುವತಿಯ ಬಾಯ್ ಫ್ರೆಂಡ್ ನ್ನು ಕೂಡ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರೋದು ಯುವತಿಗೆ ಶಾಕ್ ಕೊಟ್ಟಿದೆ. ಈಗಾಗಲೇ ಎಸ್ ಐಟಿ ಅಧಿಕಾರಿಗಳು ಈಗಾಗಲೇ ಯುವತಿಯ ವಾಸ್ತವ್ಯದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಹೀಗಾಗಿ ಸಂಜೆಯ ವೇಳೆಗೆ ಯುವತಿಯನ್ನು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಯುವತಿಯ ಖಾತೆಗೆ ಅಪರಿಚಿತ ಖಾತೆಗಳಿಂದ ಹಣ ವರ್ಗಾವಣೆಯಾಗುತ್ತಿದೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!