Monday, July 27, 2026
spot_imgspot_img
spot_imgspot_img

*ಮಾಜಿ ಸಚಿವರಾದ ರಮಾನಾಥ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ*

- Advertisement -
- Advertisement -

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವರಾದ ರಮಾನಾಥ ರೈ ಯವರ 69 ನೇ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡ ಹಿರಿಯ ನಾಯಕರಿಗೆ ಸನ್ಮಾನಿಸುವ ಕಾರ್ಯಕ್ರಮ ಇಂದು ಬಿ.ಸಿ.ರೋಡ್ – ರಂಗೋಲಿ ಸಭಾಂಗಣದಲ್ಲಿ ಯುವ ನಾಯಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ಸಾರಥ್ಯದಲ್ಲಿ ನಡೆಯಿತು.

ಪಕ್ಷದ ಹಿರಿಯ ನಾಯಕರಾದ ಸದಾನಂದ ಪೂಂಜ, ಬಿ.ಎಚ್ ಖಾದರ್, ಜಿನರಾಜ ಅರಿಗ, ಜಾಸ್ಮೀನ್ ಡಿ.ಸೋಜ, ನಸೀಮಾ ಬೇಗಂ, ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವರಾದ ರಮಾನಾಥ ರೈ ಅವರನ್ನು ಹುಟ್ಟು ಹಬ್ಬದ ಪ್ರಯುಕ್ತ ಅಭಿನಂದಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಉಸ್ತುವಾರಿ ಶರೀಲ್ ಐವನ್ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,
ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾಮಾಧವ ಮಾವೆ, ಶಾಹುಲ್ ಹಮೀದ್, ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜಯಂತಿ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ , ಮಾಜಿ ಎಪಿಯಂಸಿ ಅಧ್ಯಕ್ಷರಾದ ಪದ್ಮನಾಭ ರೈ ,ಗ್ಲೋಸಿ ಡಿ. ಸೋಜ, ನಸೀಮಾ ಬೇಗಂ ,ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಯುವ ಇಂಟೆಕ್ ಅಧ್ಯಕ್ಷ ಪದ್ಮಸ್ಮಿತ್ ಅಧಿಕಾರಿ, ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು.

- Advertisement -

Related news

error: Content is protected !!