ರಶ್ಮಿಕಾ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇ ರಿಷಬ್‌ ನಿರ್ದೇಶನದ ಸಿನೆಮಾದಲ್ಲಿ..! ಕಾಂತಾರದ ಬಗ್ಗೆ ಮಂದಣ್ಣ ಮೌನ ಏಕೆ..? ಹೊಟ್ಟೆಕಿಚ್ಚು ಎಂದ ನೆಟ್ಟಿಗರು..!

0
976

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್ ಶೆಟ್ಟಿ ರಚನೆ-ನಿರ್ದೇಶನ, ನಟನೆಯಲ್ಲಿ ಮೂಡಿಬಂದು ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ ಕಾಂತಾರ. ದಿನೇದಿನೆ ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂತಾರ ಸಿನೆಮಾದ ಸಾಗಿ ಬಂದ ಹಾದಿ ಕೂಡ ನಾವೊಮ್ಮೆ ಗಮನಿಸಲೇಬೇಕು. ಅಬ್ಬರದ ಪ್ರಚಾರವಿಲ್ಲದೆ ಕನ್ನಡದಲ್ಲೇ ಮೊದಲು ಬಿಡುಗಡೆಗೊಂಡ ಈ ಸಿನೆಮಾ ಮೌತ್ ಪಬ್ಲಿಸಿಟಿಯಿಂದಲೇ ಟ್ರೆಂಡ್ ಆಯಿತು.

ಕನ್ನಡದಲ್ಲಿ ಮೂಡಿಬಂದಿದ್ದ ಸಿನೆಮಾ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಸ್ಟಾರ್‍ ನಟ ನಟಿಯರು, ರಾಜಕೀಯ ಧುರೀಣರೂ ಸಹ ಈ ಸಿನೆಮಾವನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ?? ಗಡಿ ಮೀರಿ ಅಬ್ಬರಿಸುತ್ತಿದೆ ಕಾಂತಾರಾ…! ಅನುಷ್ಕಾ, ಶಿಲ್ಪಾ ಶೆಟ್ಟಿ ಹೀಗಂದ್ರು..!

ಬಾಕ್ಸಾಫೀಸ್ ಕಲೆಕ್ಷನ್ ಸುಮಾರು 100 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈಗ 150 ಕೋಟಿ ರೂ. ಗಡಿದಾಡಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಸಾಧನೆ ಮಾಡುವುದಕ್ಕೆ ‘ಕಾಂತಾರ’ ದೊಡ್ಡ ಯುದ್ಧವನ್ನೇ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 9 ಸಿನಿಮಾಗಳ ಪ್ರದರ್ಶನದ ಅಬ್ಬರವನ್ನು ಕಡಿಮೆ ಮಾಡಿದೆ. ಹೀಗೆಂದ ಮಾತ್ರಕ್ಕೆ ಆ ಸಿನೆಮಾಗಳನ್ನು ಉತ್ತಮವಾಗಿಲ್ಲ ಎಂದಲ್ಲ. ಗುರು ಶಿಷ್ಯರು, ತೋತಾಪುರಿ, ಗುಡ್‌ಬೈ (ರಶ್ಮಿಕಾ ಮಂದಣ್ಣ ನಟನೆಯ) , ಡಾಕ್ಟರ್ ಜಿ, ವಿಕ್ರಂ ವೇದ, ಪೊನ್ನಿಯಿನ್ ಸೆಲ್ವನ್, ಗಾಡ್ ಫಾದರ್, ನಾನೇ ವರುವೇನ್ ಸಿನೆಮಾಗಳನ್ನು ಆರ್ಭಟಿಸಲು ಬಿಟ್ಟಿಲ್ಲ ಕಾಂತಾರ…!

ಕಾಂತಾರ ಚಿತ್ರದ ಕುರಿತು ಸ್ಯಾಂಡಲ್​ವುಡ್ ಜತೆಗೆ ದಕ್ಷಿಣ ಭಾರತದ ಇತರ ಚಿತ್ರರಂಗಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಬಾಲಿವುಡ್​ನಲ್ಲಿ ಇದುವರೆಗೂ ಯಾವುದೇ ಕನ್ನಡ ಸಿನಿಮಾ ಮಾಡದ ಎರಡು ದಾಖಲೆಗಳನ್ನು ಕಾಂತಾರ ಮಾಡಿದೆ. ಒಟ್ಟಾರೆಯಾಗಿದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳ ಪ್ರೇಕ್ಷರಷ್ಟೇ ಅಲ್ಲದೆ, ಅಲ್ಲಿನ ದಿಗ್ಗಜ ನಟ-ನಟಿಯರೂ ಕಾಂತಾರವನ್ನು ವೀಕ್ಷಿಸಿ, ತಮ್ಮ ಅನಿಸಿಕೆ ಹೇಳಿಕೊಳ್ಳುತ್ತಿರುವುದಲ್ಲದೆ, ಭಾರಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಆದರೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಕಾಂತಾರದ ಯಶಸ್ಸಿನ ಕುರಿತು ಮೌನ ವಹಿಸಿರುವುದು ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದೇ ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ. ಈ ಚಿತ್ರದಲ್ಲಿನ ಪಾತ್ರ, ಸಿನಿಮಾಗೆ ಸಿಕ್ಕ ಯಶಸ್ಸಿನಿಂದಲೇ ರಶ್ಮಿಕಾ ಸಾಕಷ್ಟು ಜನಪ್ರಿಯತೆ ಗಳಿಸಿ, ಪರಭಾಷೆಗಳಲ್ಲೂ ಅವಕಾಶ ಸಿಗುವಂತಾಗಿತ್ತು. ಹೀಗೆ ತನ್ನನ್ನು ನಾಯಕಿಯಾಗಿ ಲಾಂಚ್ ಮಾಡಿದ ನಿರ್ದೇಶಕರ ಮಹತ್ವಾಕಾಂಕ್ಷೆಯ ಕಾಂತಾರ ಸಿನಿಮಾದ ಭರ್ಜರಿ ಯಶಸ್ಸಿನ ಕುರಿತು ರಶ್ಮಿಕಾ ಮೌನ ವಹಿಸಿರುವುದು ಕೂಡ ಹಲವು ಸಿನಿಪ್ರಿಯರ ಹುಬ್ಬೇರುವಂತಾಗಿಸಿದೆ.

ಗುಡ್‌ಬೈ ಸಿನೆಮಾಗೆ ಟಕ್ಕರ್‌‌ ಕೊಟ್ಟ ಕಾಂತಾರ
ಬಾಲಿವುಡ್‌ನ ಸ್ಟಾರ್‌ ಅಮಿತಾಬ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಗುಡ್‌ಬೈ ಸಿನೆಮಾಗೆ ಕಾಂತಾರ ಸಖತ್ ಫೈಟ್ ಕೊಟ್ಟಿದೆ. ತೆರೆಮೇಲೆ ತಕ್ಕ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡುತ್ತದೆ ಎಂದು ಅಂದ್ಕೊಂಡಿದ್ದ ಸಿನೆಮಾ ತಂಡಕ್ಕೆ ತಣ್ಣೀರೆರಚಿದ ದಕ್ಷಿಣ ಭಾರತದ ಸಿನೆಮಾ ರಂಗ…! ತನ್ನ ಸಿನೆಮಾ ಹಿಟ್ ಆಗಿಲ್ಲ ಅನ್ನೋ ಕಾರಣಕ್ಕೆ ರಶ್ಮಿಕಾ ತುಟಿ ಪಿಟಿಕ್ ಅನ್ನುತ್ತಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು..!

astr