Friday, March 29, 2024
spot_imgspot_img
spot_imgspot_img

ರೆಪೊ ದರವನ್ನು ಬದಲಾಯಿಸದ ಆರ್‌ಬಿಐ

- Advertisement -G L Acharya panikkar
- Advertisement -

ಮುಂಬೈ: ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಮುಖವಾದ ಬಡ್ಡಿ ದರಗಳನ್ನು ಬದಲಾವಣೆ ಮಾಡದಿರಲು ನಿರ್ಧರಿಸಿದೆ.ಕೊರೋನ ವೈರಸ್‌ನಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಶುಕ್ರವಾರ ನಡೆದ ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೆಪೊ ದರವನ್ನು ಮತ್ತೆ ಶೇ.4ಕ್ಕೆ ಉಳಿಸಲಾಗಿದೆ. ಡಿಸೆಂಬರ್ ತಿಂಗಳಿಂದ ಆರ್‌ಟಿಜಿಎಸ್ ವ್ಯವಸ್ಥೆಯನ್ನು ದಿನದ 24 ಗಂಟೆಯೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.


ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇ.9.5ರಷ್ಟು ಸಂಕುಚಿತಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಚಟುವಟಿಕೆ ಕ್ರಮೇಣವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಕಾರ್ಖಾನೆಗಳು ಸಹ ಪುನಾರಂಭಗೊಂಡಿವೆ. ಜೊತೆಗೆ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುವ ಸಾಧ್ಯತೆಯಿದೆ. ಸಂಕಷ್ಟದ ನಡುವೆಯೂ ಆರ್ಥಿಕ ಪುನಶ್ಚೇತನದ ನಿರೀಕ್ಷೆ ಇಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಭೆಯ ಬಳಿಕ ತಿಳಿಸಿದರು.

- Advertisement -

Related news

error: Content is protected !!