Thursday, April 25, 2024
spot_imgspot_img
spot_imgspot_img

*ಆರ್​ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ*

- Advertisement -G L Acharya panikkar
- Advertisement -

ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಬಗ್ಗು ಬಡಿದ ಕೊಹ್ಲಿ ಪಡೆ ಮೊದಲ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 

ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ.

ಈಗಾಗಲೇ ಮೂರು ಪಂದ್ಯ ಮುಗಿದಿದ್ದು, ಈ ಪಂದ್ಯಗಳ ಫಲಿತಾಂಶದಲ್ಲಿ ಆರ್​ಸಿಬಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಸಿಎಸ್​ಕೆ ಎರಡನೇ ಸ್ಥಾನಕ್ಕೆ ಇಳಿದಿದೆ.

ಆರ್​ಸಿಬಿ, ಸಿಎಸ್​ಕೆ, ಡೆಲ್ಲಿ ತಲಾ ಒಂದು ಮ್ಯಾಚ್​ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಎಲ್ಲರಿಗೂ ಪಾಯಿಂಟ್ಸ್​ ಎರಡೇ ಬಂದರೂ ರನ್​ ರೇಟ್​ ಆಧಾರದ ಮೇಲೆ ಆರ್​ಸಿಬಿ ಸಿಎಸ್​ಕೆಗಿಂತ ಮುಂದಿದೆ.

ಆರ್​ಸಿಬಿಯ ರನ್​ ರೇಟ್​ +0.500 ಇದ್ದರೆ, ಸಿಎಸ್​ಕೆಯದ್ದು, +0486 ಇದೆ. ಡೆಲ್ಲಿಯದ್ದು +0.000 ಇದೆ.

- Advertisement -

Related news

error: Content is protected !!