- Advertisement -
- Advertisement -




ವಿಟ್ಲ : ಜೆಸಿಐ ವಿಟ್ಲ ವತಿಯಿಂದ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಒಂದು ದಿವಸದ “Reboot”ತರಬೇತಿ ಕಾರ್ಯಕ್ರಮವನ್ನು ಮಾಡಲಾಯಿತು.
ಜೆಸಿ ಸಂತೋಷ್ ಶೆಟ್ಟಿ ಪೆಲತಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಜೇಸಿಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು ಆದ ಜೆಸಿ. ಶ್ರೀಧರ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಮುಖ್ಯ ಅತಿಥಿಯಾಗಿ ಜೇಸಿಸ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಜೆಸಿ. ಮೋಹನ್ ಏ ಭಾಗವಹಿಸಿದ್ದರು. ತರಬೇತುದಾರರಾಗಿ ಪಾಸ್ಟ್ ಜೆ. ಎಲ್. ಸಿ ಜೆಸಿಐ ಇಂಡಿಯಾ ಜೆಸಿ. ಸೌಜನ್ಯ ಹೆಗ್ಡೆ ಹಾಗೂ ರಾಷ್ಟ್ರೀಯ ತರಬೇತುದಾರರಾದ ಜೆಸಿ. ರಾಜೇಶ್ವರಿ ಶೆಟ್ಟಿ ನಡೆಸಿಕೊಟ್ಟರು. ಜೇಸಿಸ್ ಶಾಲೆಯ ಪ್ರಾಂಶುಪಾಲರು ಆದ ಜಯರಾಮ್ ರೈ,ಜೆಸಿಐ ವಿಟ್ಲದ ಕಾರ್ಯದರ್ಶಿ ಜೆಸಿ ಮುರಳಿ ಪ್ರಸಾದ್, ಕಾರ್ಯಕ್ರಮ ಸಂಯೋಜಕರು ಜೆಸಿ ಲುವಿಸ್ ಮಸ್ಕ್ಯಾರೆನ್ಹಸ್, ಜೇಸಿಸ್ ಎಜುಕೇಶನ್ ಸೊಸೈಟಿಯ ನಿರ್ದೇಶಕರುಗಳಾದ ಆದ ಜೆಸಿ. ಹಸನ್ ಹಾಗೂ ಜೆಸಿ. ಪ್ರಕಾಶ್ ಉಪಸ್ಥಿತರಿದ್ದರು. ಜೆಸಿ ರಾಧಾ ಕೃಷ್ಣ ಏ ಹಾಗೂ ಜೆಸಿ. ಹೇಮಲತಾ ಸಹಕರಿಸಿದರು.

- Advertisement -








