Friday, May 17, 2024
spot_imgspot_img
spot_imgspot_img

ಹೊಸ ವರ್ಷಕ್ಕೆ ಗೈಡ್‌ಲೈನ್ಸ್ ಬಿಡುಗಡೆ – ಪೊಲೀಸ್ ಇಲಾಖೆಯಿಂದ ಭರ್ಜರಿ ಸಿದ್ಧತೆ

- Advertisement -G L Acharya panikkar
- Advertisement -

ಹೊಸ ವರ್ಷಾಚರಣೆಗೆ 5 ದಿನ ಮಾತ್ರ ಬಾಕಿ ಇವೆ. ಈ ಬಾರಿಯ ಹೊಸ ವರ್ಷ ಆಚರಣೆಗೆ ವಿವಿಧ ಇಲಾಖೆಗಳು ಸಭೆ ನಡೆಸಿ ಒಂದಷ್ಟು ನಿಯಮಗಳನ್ನು ಜಾರಿಗೆ ತಂದಿವೆ. 2024ರ ಹೊಸ ವರ್ಷ ಹೇಗಿರುತ್ತದೆ? ಏನೆಲ್ಲಾ ತಯಾರಿಗಳು ನಡೆದಿವೆ ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿಯ ಜನರು ತುದಿಕಾಲಲ್ಲಿ ನಿಂತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ವಿವಿಧ ಇಲಾಖೆಗಳು ಸಭೆ ನಡೆಸಿ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಈ ಬಾರಿಯ ಹೊಸ ವರ್ಷಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಗೈಡ್‌ಲೈನ್ಸ್‌ಗಳನ್ನು ಬಿಡುಗಡೆ ಮಾಡಿದ್ದಾರೆ.

ಹೊಸ ವರ್ಷಾಚರಣೆಗೆ ಇರುವ ಗೈಡ್‌ಲೈನ್ಸ್ ಏನು?

ನಗರದ ಎಂಜಿ ರೋಡ್, ಬ್ರಿಗೆಡ್ ರೋಡ್, ರೆಸಿಡೆನ್ಸಿ ರೋಡ್, ಟ್ರಿನಿಟಿ ಸರ್ಕಲ್, ಫಿನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಸ್ಟಾರ್ ಹೋಟೆಲ್‌ಗಳು ಸೇರಿದಂತೆ ಪಬ್ ಕ್ಲಬ್‌ಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ.
ಕೇಂದ್ರ ವಿಭಾಗದ ವಿವಿಧ ರಸ್ತೆಗಳಲ್ಲಿ ಮೂರು ಸಾವಿರ ಪೊಲೀಸರ ನಿಯೋಜನೆ.
ಮಹಿಳೆಯರ ಸುರಕ್ಷೆತೆಗಾಗಿ ಮಹಿಳಾ ಅಧಿಕಾರಿಗಳ ಜೊತೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ವುಮೆನ್ ಸೇಫ್ಟಿ ಐಸ್‌ಲ್ಯಾಂಡ್‌ಗಳ ನಿರ್ಮಾಣ.
ಮಕ್ಕಳು, ಮಹಿಳೆಯರು, ಕಳುವಾದ ವಸ್ತುಗಳ ರಕ್ಷಣೆಗಾಗಿ ಪೊಲೀಸ್ ಕಿಯೋಸ್ಕ್‌ಗಳ ನಿರ್ಮಾಣ.
ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ವಾಚ್ ಟವರ್‌ಗಳ ನಿರ್ಮಾಣ, ಬೈನಾಕ್ಯುಲರ್‌ಗಳ ಮೂಲಕ ನಿಗಾ.
ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಬ್ರಿಗೆಡ್ ರೋಡ್, ಮೇಯೋ ಹಾಲ್ ಜಂಕ್ಷನ್, ಒಪೇರಾ ಜಂಕ್ಷನ್‌ವರಗೆ ಏಕಮುಖ ಸಂಚಾರ.
ಎಂಜಿ ರೋಡ್ ಮೆಟ್ರೋ ಸ್ಟೇಷನ್‌ನಲ್ಲಿ ಜನಸಂದಣಿ ಹಿನ್ನೆಲೆ ರಾತ್ರಿ 11 ಗಂಟೆಯಿಂದ 2 ಗಂಟೆವರೆಗೆ ನಿರ್ಗಮನಕ್ಕೆ ಮಾತ್ರ ಅವಕಾಶ. ಟ್ರಿನಿಟಿ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಬಳಸಲು ಮನವಿ.
ಕೋರಮಂಗಲ, ಇಂದಿರಾನಗರ, ಮಾರತ್ತಹಳ್ಳಿ, ಏರ್ಪೋಟ್ ರಸ್ತೆ, ವೈಟ್ ಫೀಲ್ಡ್‌ನಲ್ಲಿ 2500 ಪೊಲೀಸರ ನಿಯೋಜನೆ.
ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ.
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಶ್ವಾನದಳ ಸೇರಿದಂತೆ ವಿವಿಧ ತಂಡಗಳಿಂದ ತಪಾಸಣೆ.
ಹೊಸ ವರ್ಷಕ್ಕೆ ನಗರಾದ್ಯಂತ ಸುಮಾರು 10,000 ಪೊಲೀಸರ ನಿಯೋಜನೆ.
ಡ್ರಗ್ಸ್ ಪಾರ್ಟಿಗಳ ಕಡಿವಾಣ ಸಂಬಂಧ ಪೊಲೀಸರ ಸ್ಪೆಷಲ್ ಡ್ರೈವ್, ಕಳೆದ ಒಂದು ತಿಂಗಳಲ್ಲಿ 40 ಪ್ರಕರಣಗಳು ದಾಖಲು, 56 ಜನ ಪೆಡ್ಲರ್‌ಗಳ ಬಂಧನ.
ಕ್ಲಬ್‌ಗಳು, ರೆಸ್ಟೋರೆಂಟ್‌ಗಳು ಪಾರ್ಟಿಗಳು ನಿಗದಿತ ಸಮಯಕ್ಕೆ ಮುಗಿಸುವಂತೆ ನೋಟಿಸ್ ಜಾರಿ.
ಮಧ್ಯರಾತ್ರಿ ಒಂದು ಗಂಟೆಯವರೆಗೆ ಮಾತ್ರ ಕ್ಲಬ್‌ಗಳು, ರೆಸ್ಟೋರೆಂಟ್‌ಗಳಿಗೆ ಅನುಮತಿ. ಆ ಸಮಯ ಮೀರದಂತೆ ಎಚ್ಚರಿಕೆ.
ಸುರಕ್ಷತಾ ದೃಷ್ಟಿಯಿಂದ ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿಷೇಧ.
ಯಾವುದೇ ಅಹಿತರಕರ ಘಟನೆಗಳು, ಡ್ರಗ್ಸ್ ಪಾರ್ಟಿಗಳು ಗಮನಕ್ಕೆ ಬಂದರೆ 112ಕ್ಕೆ ಕರೆ ಮಾಡಲು ಸಾರ್ವಜನಿಕರಿಗೆ ಮನವಿ.

- Advertisement -

Related news

error: Content is protected !!