Sunday, June 21, 2026
spot_imgspot_img
spot_imgspot_img

ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ..!

- Advertisement -
- Advertisement -

ನದಿಯಲ್ಲಿ ಮುಳುಗಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದ ಉತ್ತರ ಪಿನಾಕಿನಿ ಎಂಬಲ್ಲಿ ನಡೆದಿದೆ. ವಿದ್ಯಾ (15) ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕಿ‌.

ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ಚೆನ್ನಾಗಿ ಕಲಿಯುವಂತೆ ಪೋಷಕರು ಬುದ್ಧಿಮಾತು ಹೇಳಿದ್ದರಿಂದ ಆಕೆ ಸಿಟ್ಟುಗೊಂಡು ತನ್ನ ಜೀವನವನ್ನೇ ಅಂತ್ಯಗೊಳಿಸಿಕೊಂಡಿದ್ದಾಳೆ. ಗೌರಿಬಿದನೂರಿನಲ್ಲಿರುವ ಉತ್ತರ ಪೀನಾಕಿನಿ ನದಿ‌ ದಡಕ್ಕೆ ಹೋದ ಆಕೆ ನೀರಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಗೌರಿಬಿದನೂರು ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!