Wednesday, June 17, 2026
spot_imgspot_img
spot_imgspot_img

ರೇಣುಕಾಸ್ವಾಮಿ ಕೊಲೆ ಪ್ರಕರಣ; ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ

- Advertisement -
- Advertisement -

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು.

ಸಿಸಿಹೆಚ್ 63ರ ನ್ಯಾಯಾಧೀಶರ ಮುಂದೆ ಆರೋಪಿಗಳು ಹಾಜರಾದರು. ಚಾರ್ಜ್ ಫ್ರೇಮ್‌ಗೆ ನ್ಯಾಯಾಧೀಶರು ಸಮಯ ನಿಗದಿಪಡಿಸಿದರು. ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.

ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್, ಪುಟ್ಟಸ್ವಾಮಿ, ರಾಘವೇಂದ್ರ, ನಂದೀಶ್, ರವಿಶಂಕರ್, ನಾಗರಾಜು, ಲಕ್ಷ್ಮಣ್, ದೀಪಕ್ ಕುಮಾರ್ ನ್ಯಾಯಾಲಯದ ಮುಂದೆ ಹಾಜರಿದ್ದರು. ವಿನಯ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಗೈರಾಗಿದ್ದರು.

ವಿಚಾರಣೆ ಬಳಿಕ ಪವಿತ್ರಾ ಗೌಡ ಕೋರ್ಟ್ ಆವರಣದಲ್ಲೇ ನಿಂತಿದ್ದರು. ದರ್ಶನ್ ಹೋಗುವುದನ್ನು ನೋಡಿಕೊಂಡು ನಿಂತಿದ್ದರು. ಆದರೆ, ಪವಿತ್ರಾ ಗೌಡ ಕಡೆ ತಿರುಗಿ ನೋಡದೇ ದರ್ಶನ್ ತೆರಳಿದರು. ವಿಚಾರಣೆಗೆ ಹಾಜರಾಗಿದ್ದ ದರ್ಶನ್‌ಗೆ ನಟ ಧನ್ವೀರ್ ಸಾಥ್ ಕೊಟ್ಟಿದ್ದರು.

- Advertisement -

Related news

error: Content is protected !!