Sunday, April 28, 2024
spot_imgspot_img
spot_imgspot_img

ಮಲ್ಪೆ ಬೀಚ್‌ನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿದ ಮಗುವಿನ ರಕ್ಷಣೆ

- Advertisement -G L Acharya panikkar
- Advertisement -

ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡ ಒಂದೂವರೆ ವರ್ಷ ದ ಮಗುವನ್ನು ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ರಕ್ಷಿಸಿರುವ ಘಟನೆ ನಿನ್ನೆ ಸಂಜೆ ವೇಳೆ ನಡೆದಿದೆ.

ಮಂಗಳವಾರ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದ ಮೈಸೂರು ಮೂಲದ ದಂಪತಿ ತಮ್ಮ ಮಗು ಪೂರ್ವಿಯೊಂದಿಗೆ ಸಮುದ್ರದಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಮಗು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ, ನೀರು ಕುಡಿದು, ಪ್ರಜ್ಞಾಹೀನವಾಗಿತ್ತು.

ಇದನ್ನು ಕಂಡ ಮಲ್ಪೆಬೀಚ್ ಅಟೋರಿಕ್ಷಾ ನಿಲ್ದಾಣದ ಅಟೋ ಚಾಲಕರು ಆ ಮಗುವನ್ನು ತನ್ನ ಅಟೋರಿಕ್ಷಾ ಮೂಲಕ ಈಶ್ವರ್ ಮಲ್ಪೆ ಅವರ ಆಂಬುಲೆನ್ಸ್ ಬಳಿ ತಲುಪಿಸಿದರು.ತಕ್ಷಣ ಕಾರ್ಯ ಪ್ರವ್ರತ್ತರಾದ ಈಶ್ವರ್ ಮಲ್ಪೆ ಮತ್ತು ತಂಡ ಆ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ, ಆಂಬುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಮಗು ಚೇತರಿಕೆಯನ್ನು ಕಾಣುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ

- Advertisement -

Related news

error: Content is protected !!