Tuesday, April 23, 2024
spot_imgspot_img
spot_imgspot_img

‘ರೈಡರ್​​’ ಸಿನಿಮಾದ ಮೋಷನ್​ ಪೋಸ್ಟರ್​ಗೆ ಒಂದು ಮಿಲಿಯನ್​ ಹಿಟ್ಸ್​.!

- Advertisement -G L Acharya panikkar
- Advertisement -

ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರದ ಪೋಸ್ಟರ್ ಯೂಟ್ಯೂಬ್ ಲಹರಿ ಆಡಿಯೊ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಮಿಲಿಯನ್ ಹಿಟ್ಸ್ ಕಂಡಿದೆ. ಬಿಡುಗಡೆಯಾದ 18 ಗಂಟೆಗಳಲ್ಲಿ ಒಂದು ಮಿಲಿಯನ್ ಹಿಟ್ಸ್​ ಕಂಡಿರುವುದರ ಜತೆಗೆ, ಸೋಷಿಯಲ್​ ಮೀಡಿಯಾದಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡ್​ ಆಗುತ್ತಿದೆ.

‘ರೈಡರ್​’ ಚಿತ್ರವನ್ನು ಲಹರಿ ಫಿಲಂಸ್​ನಡಿ ಚಂದ್ರು ಮನೋಹರನ್​ ನಿರ್ಮಿಸುತ್ತಿದ್ದು, ತೆಲುಗಿನ ಜನಪ್ರಿಯ ನಿರ್ದೇಶಕ ವಿಜಯ್​ ಕುಮಾರ್​ ಕೊಂಡಾ ಅವರು ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತವಿದ್ದು, ಶ್ರೀಷ ಕೂದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ನಿಖಿಲ್​ಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ ನಟಿಸುತ್ತಿದ್ದು, ಕಿರುತೆರೆಯಲ್ಲಿ ಹೆಸರು ಮಾಡಿರುವ ಸಂಪದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ರಾಜೇಶ್​ ನಟರಂಗ, ಚಿಕ್ಕಣ್ಣ, ಸಂಪದ, ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

- Advertisement -

Related news

error: Content is protected !!