




ವಿಟ್ಲ: ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ(RMSA) ಪ್ರಾಥಮಿಕ ವಿಭಾಗದ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಸಂಭ್ರಮ 2025-26 ನವೆಂಬರ್ 28-11-2025ನೇ ಶನಿವಾರ ಮತ್ತು 29-11-2025ನೇ ಶನಿವಾರ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ(RMSA) ನಡೆಯಲಿದೆ.
ದಿನಾಂಕ: 28-11-2025ನೇ ಶುಕ್ರವಾರ ಬೆಳಿಗ್ಗೆ 9:30ಕ್ಕೆ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ(RMSA) ಪ್ರಾಥಮಿಕ ವಿಭಾಗದ ವಿಶ್ರಾಂತಿ ಶಿಕ್ಷಕಿ ಶಂಕರಿ ಅಮ್ಮ ಧ್ವಜರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಬಳಿಕ ಬಹುಮಾನ ವಿತರಣಾ ಸಮಾರಂಭ ನಡೆಯಲಿದ್ದು, ಸರಕಾರಿ ಪ್ರೌಢಶಾಲೆ(RMSA) ವಿಟ್ಲ (ಪ್ರಾಥಮಿಕ ವಿಭಾಗ) ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಶಂಕರ .ಸಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಶ್ರೀ ಯೋಗೀಶ್ವರ ಗೋರಕ್ಷನಾಥ ಮಠ ಮಠಾಧಿಪತಿ ರಾಜಗುರು ಶ್ರದ್ಧಾನಾಥಜೀ ಮಹಾರಾಜ್, ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸಂಗೀತ ಪಾಣೆಮಜಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಪದ್ಮಶ್ರೀ ಪುರಸ್ಕೃತ ’ಅಕ್ಷರ ಸಂತ’ ಹರೇಕಳ ಹಾಜಬ್ಬ ಮಂಗಳೂರು, ವಿಟ್ಲ ವಲಯ ಶಿಕ್ಷಣ ಸಂಯೋಜಕಿ ಸುಧಾ, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ರೂ|| ಜೈಕಿಶನ್, ವಿಟ್ಲ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಬಿಂದು ಬಿ.ಜೆ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

ದಿನಾಂಕ: 28-11-2025ನೇ ಶನಿವಾರ ಸಂಜೆ 5:00ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಘನ ಉಪಸ್ಥಿತರಿರುವರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್‌ವಿಟ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
D.E.U.T.Z ಎಂಜಿನ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರ ವೇದಕಜ್ಞ ವಿಟ್ಲ, S.L.V ಬುಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾಲಕ ದಿವಾಕರ ದಾಸ್ ನೇರ್ಲಾಜೆ, ಪುತ್ತೂರು ಜೋಸ್ ಆಲುಕಾಸ್ ಪ್ರೈವೆಟ್ ಲಿಮಿಟೆಡ್ ಮ್ಯಾನೇಜರ್ ಹರಿ ಮರಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ದ.ಕ. ಮಂಗಳೂರು ಉಪನಿರ್ದೇಶಕ ಶಶಿಧರ್ ಜಿ.ಎಸ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ವಿಟ್ಲ ಶ್ರೀ ಭಾರತೀ ಜನಾರ್ದನ ಸೇವಾ ಟ್ರಸ್ಟ್ ಕಾರ್ಯದರ್ಶಿ ಪಿ. ಸುಬ್ರಾಯ ಪೈ, ಎಸ್.ಡಿ.ಎಂ.ಸಿ ಪ್ರೌಢವಿಭಾಗ ಅಧ್ಯಕ್ಷ ರಶ್ಮಿ ಹರೀಶ್, ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆ (RMSA) ವಿಟ್ಲ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮಾನಾಥ ವಿಟ್ಲ, ಪ್ರೌಢ ವಿಭಾಗ ಮುಖ್ಯೋಪಾಧ್ಯಯ ಫೆಲಿಸಿಟಾಸ್ ಈವಾ ಗಲ್ಬಾವೊ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

ಪೂರ್ವಾಹ್ನ 10:00ರಿಂದ ವಿಟ್ಲ ಅಂಗನವಾಡಿ, ಪೂರ್ವಪ್ರಾಥಮಿಕ (LKG,UKG),1 ರಿಂದ 4 ಕನ್ನಡ ಮತ್ತು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಂದ, ಊಟದ ವಿರಾಮದ ಬಳಿಕ ಅಪರಾಹ್ನ 2:00ರಿಂದ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.








