Friday, July 24, 2026
spot_imgspot_img
spot_imgspot_img

ನಟಿ ರಿಯಾ ಚಕ್ರವರ್ತಿ ಮನೆ ಮೇಲೆ ಎನ್ ಸಿ ಬಿ ದಾಳಿ- ಸುಶಾಂತ್ ಮನೆಯ ಮ್ಯಾನೇಜರ್ ಎನ್ ಸಿ ಬಿ ವಶಕ್ಕೆ

- Advertisement -
- Advertisement -

ಮುಂಬೈ: ನಟಿ ರಿಯಾ ಚಕ್ರವರ್ತಿ ಅವರ ಮುಂಬೈನಲ್ಲಿರುವ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆ ವೇಳೆ ಡ್ರಗ್ಸ್ ಬಳಕೆ ಆರೋಪ ಕೇಳಿಬಂದಿತ್ತು. ರಿಯಾ ಸಹೋದರ ಶೌವಿಕ್ ಹಾಗೂ ಡ್ರಗ್ಸ್ ಡೀಲರ್ ಆರೋಪದ ಮೇರೆಗೆ ಅರೆಸ್ಟ್ ಆಗಿರುವ ಜೈದ್ ವಿಲಾತ್ರಾ ನಡುವೆ ಲಿಂಕ್ ಇದೆ ಎಂಬ ಅನುಮಾನದ ಮೇರೆಗೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಿಯಾ ಸಹೋದರನಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಸುಶಾಂತ್ ಮನೆಯ ಮ್ಯಾನೇಜರ್ ಎನ್ ಸಿ ಬಿ ವಶಕ್ಕೆ:

ಮತ್ತೊಂದುಕಡೆ ಸುಶಾಂತ್ ಅವರ ಮನೆಯ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಮನೆ ಮೇಲೂ ಎನ್ ಸಿಬಿ ದಾಳಿ ನಡೆದಿದೆ. ಬಳಿಕ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೊಬೈಲ್ ಸಂದೇಶಗಳಲ್ಲಿ ಡ್ರಗ್ಸ್ ಬಳಕೆ ಹಾಗೂ ಸಾಗಾಟ ಮಾಡಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ರಿಯಾ, ಶೌವಿಕ್,ಸ್ಯಾಮ್ಯುಯೆಲ್ ಬಗ್ಗೆ ಎನ್ ಸಿಬಿ ತನಿಖೆ ನಡೆಸುತ್ತಿದೆ.

- Advertisement -

Related news

error: Content is protected !!