Saturday, April 20, 2024
spot_imgspot_img
spot_imgspot_img

ತಾಯಿ ಕೈಯಿಂದ ಜಾರಿ ಬಿದ್ದು ಮಗು ಮೃತ್ಯು

- Advertisement -G L Acharya panikkar
- Advertisement -

ಮಂಡ್ಯ: ಬೈಕ್‌ನಿಂದ ಕೈ ಜಾರಿ ಬಿದ್ದು, ಒಂದು ವರ್ಷದ ಪುಟ್ಟ ಕಂದಮ್ಮ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ತಾಲೂಕಿನ ಕಿರಂಗಂದೂರು ಗ್ರಾಮದ ಬಳಿ ನಡೆದಿದೆ.

ಚಂದಗಾಲು ಗ್ರಾಮದ ಶಿವಕುಮಾರ್- ರಂಜಿತಾ ದಂಪತಿ ಮದುವೆ ಕಾರ್ಯಕ್ರಮಕ್ಕೆ ಬೈಕ್​ನಲ್ಲಿ ಹೋಗಿದ್ದರು. ಅಲ್ಲಿಂದ ವಾಪಸ್ಸಾಗುವ ವೇಳೆ ರಸ್ತೆ ಮಧ್ಯೆ ಬಂದ ಹಂಪ್​ನಲ್ಲಿ ಮಗು ತಾಯಿಯ ಕೈತಪ್ಪಿ ಕೆಳಗೆ ಬಿದ್ದಿದೆ.

ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಮಗುವನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!